ಮುಂಬೈ

ಲವರ್ ಜೊತೆ ಮಜಾ ಮಾಡಲು ಹಣಕ್ಕಾಗಿ 38 ಮೊಬೈಲ್ ಕದ್ದು ಸಿಕ್ಕಿಬಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿನಿಯರು !

Pinterest LinkedIn Tumblr

ಮುಂಬೈ: ಪ್ರೀತಿಸಿದ ಯುವಕನೊಂದಿಗೆ ಡೇಟಿಂಗ್ ಮಾಡಲು ಕಾಲೇಜು ಯುವತಿಯರಿಬ್ಬರು 38 ಮೊಬೈಲ್ ಕದ್ದು ಸಿಕ್ಕಿಬಿದ್ದಿರುವ ಘಟನೆ ಮುಂಬೈನ ಸ್ಥಳೀಯ ಪಶ್ಚಿಮ ರೈಲ್ವೇ ವಿಭಾಗದಲ್ಲಿ ನಡೆದಿದೆ.

ಈ ಕುರಿತು ಮಾಹಿತಿ ನೀಡಿರುವ ರೈಲ್ವೇ ಕ್ರೈಂ ಬ್ರಾಚ್ ಪೊಲೀಸರು, ಟ್ವಿಂಕಲ್ ಸೋನಿ (20) ಹಾಗೂ ಟಿನಲ್ ಪಾರ್ಮಾ (19) ರನ್ನು ಮಹಿಳಾ ಮೀಸಲಾದ ಬೋಗಿಗಳಲ್ಲಿ ಪ್ರಯಾಣಿಸುವ ವೇಳೆ ಮೊಬೈಲ್ ಫೋನ್ ಕದ್ದ ಆರೋಪದಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇಬ್ಬರು ಯುವತಿಯರು ಹೃಷಿ ಸಿಂಗ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದು, ಯುವಕನೊಂದಿಗೆ ಡೇಟಿಂಗ್ ನಡೆಸಲು ಹಣಕ್ಕಾಗಿ ಈ ಕೃತ್ಯ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ. ಕದ್ದ ಎಲ್ಲಾ ಮೊಬೈಲ್ ಗಳನ್ನು ರಾಜಪುರೋಹಿತ್(28) ಎಂಬಾತನಿಗೆ ಮಾರಾಟ ಮಾಡಿ 3 ಲಕ್ಷ ರೂ. ಹಣವನ್ನು ಹಣ ಪಡೆದಿದ್ದಾರೆ.

ಹೆಚ್ಚಿನ ಕಳ್ಳತನ ಪ್ರಕರಣಗಳು ಮುಂಬೈನ ಬೋರಿವಿಲಿ ಮತ್ತು ಸಾಂತಕ್ರೂಜ್ ನಿಲ್ದಾಣಗಳ ನಡುವೆ ನಡೆಯುತಿತ್ತು. ಅದ್ದರಿಂದ ಹೆಚ್ಚಿನ ನಿಗಾ ವಹಿಸಲಾಗಿತ್ತು. ಇದರಂತೆ ಮೇ 30 ರಂದು ಸೋನಿ ಕೃತ್ಯ ನಡೆಸುತ್ತಿದ್ದ ವೇಳೆ ಮಹಿಳಾ ಪೊಲೀಸ್ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಬಳಿಕ ವಿಚಾರಣೆ ನಡೆಸಿದ ವೇಳೆ ಕಾಲೇಜಿಗೆ ಹೋಗುವ ಹಾಗೂ ಬರುವ ವೇಳೆ ತಮ್ಮ ಕೈಚಳಕ ತೋರುತ್ತಿದ್ದ ಕುರಿತ ಮಾಹಿತಿ ಬಹಿರಂಗ ಪಡಿಸಿದ್ದಾರೆ ಎಂದು ಮುಂಬೈ ಪಶ್ಚಿಮ ರೈಲ್ವೇ ಡಿಸಿಪಿ ತಿಳಿಸಿದ್ದಾರೆ.

ಯುವತಿ ಟ್ವಿಂಕಲ್ ಸೋನಿ ವಶಕ್ಕೆ ಪಡೆದ ವೇಳೆ ಆಕೆಯ ಬ್ಯಾಗ್ ನಿಂದ 9 ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದು, ಒಟ್ಟಾರೆ 38 ಮೊಬೈಲ್ ಹಾಗೂ 30 ಮೆಮೋರಿ ಕಾರ್ಡ್ ಗಳನ್ನು ವಿಚಾರಣೆಯ ವೇಳೆ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಇಬ್ಬರನ್ನು ಪೊಲೀಸರು ಜೂನ್ 8 ವರೆಗೂ ಕಸ್ಟಡಿಗೆ ಪಡೆದಿದ್ದಾರೆ.

Comments are closed.