ಜೋಹಾನ್ಸ್ ಬರ್ಗ್: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಹಾತ್ಮ ಗಾಂಧಿ ಅವರು ಪ್ರಯಾಣಿಸಿದ್ದ ರೈಲಿನಲ್ಲಿ ಪೆಂಟ್ರಿಚ್ ನಿಂದ ಪೀಟರ್ ಮಾರಿಜ್ ಬರ್ಗ್ ವರೆಗೆ ಗುರುವಾರ ಪ್ರಯಾಣ ಮಾಡಿದರು.
125 ವರ್ಷಗಳ ಹಿಂದೆ ಇದೇ ರೈಲಿನ ಬಿಳಿಯರಿಗಾಗಿ ಮೀಸಲಿದ್ದ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಮಹಾತ್ಮ ಗಾಂಧಿ ಅವರನ್ನು ಪೀಟರ್ ಮಾರಿಜ್ ಬರ್ಗ್ ನಿಲ್ದಾಣದಲ್ಲಿ ರೈಲಿನಿಂದ ಹೊರ ಹಾಕಲಾಗಿತ್ತು.
ಜೂನ್ 7, 1893ರಲ್ಲಿ ಮಹಾತ್ಮ ಗಾಂಧಿ ಅವರು ತಾವು ಕುಳಿತಿದ್ದ ಪ್ರಥಮ ದರ್ಜೆ ಸ್ಥಳವನ್ನು ಬಿಟ್ಟುಕೊಡಲು ನಿರಾಕರಿಸಿದಾಗ ಅವರನ್ನು ರೈಲಿನಿಂದ ಹೊರದಬ್ಬಲಾಗಿತ್ತು.
ಮಹಾತ್ಮ ಗಾಂಧಿ ಅವರು ಪ್ರಯಾಣಿಸಿದ್ದ ರೈಲಿನಲ್ಲಿ ಸುಷ್ಮಾ ಸ್ವರಾಜ್ ಅವರು ಪೆಂಟ್ರಿಚ್ ನಿಂದ ಪೀಟರ್ ಮಾರಿಜ್ ಬರ್ಗ್ ವರೆಗೆ ಪ್ರಯಾಣಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.
ಮಹಾತ್ಮಗಾಂಧಿ ಅವರನ್ನು ರೈಲಿನಿಂದ ಹೊರದಬ್ಬಿ 125 ವರ್ಷ ತುಂಬಿದ್ದು, ಈ ದಿನವನ್ನು ದಕ್ಷಿಣ ಆಫ್ರಿಕಾ ವಿಶಿಷ್ಟವಾಗಿ ಆಚರಿಸುತ್ತಿದೆ.
ಇಂದು ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನ ಕೆಲ ಭಾಗ, ಮುಖ್ಯ ದ್ವಾರ ಹಾಗೂ ಬೋಗಿಗಳನ್ನು ರಂದು ಖಾದಿ ಬಟ್ಟೆಯಿಂದ ಅಲಂಕರಿಸುವ ಮೂಲಕ ಮಹಾತ್ಮಗಾಂಧಿಗೆ ಗೌರವ ಸಲ್ಲಿಸಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಸುಷ್ಮಾ ಸ್ವರಾಜ್ ಭಾಗಿಯಾಗಿದ್ದಾರೆ.
ಐದು ದಿನಗಳ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಸುಷ್ಮಾ ಸ್ವರಾಜ್ ಅವರು ಈಗಾಗಲೇ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಫೋಸ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
Comments are closed.