ಕರ್ನಾಟಕ

‘ನನ್ನ ಪತ್ನಿ ಐಶ್ವರ್ಯಾಗೋಸ್ಕರ ಜೈಲಿಗೆ ಹೋಗೋಕು ರೆಡಿ’: ಹುಚ್ಚಾ ವೆಂಕಟ್ (Video)

Pinterest LinkedIn Tumblr

ಬೆಂಗಳೂರು: ಕೋಟಿ ಹಣ ಕೊಡುತ್ತೇವೆ ಚುನಾವಣೆಗೆ ನಿಲ್ಲಬೇಡ ಎಂದು ಅವಾಜ್ ಹಾಕಿದ್ರು. ಹಣ ನನ್ನ ಎಕ್ಕಡ ಎಂದು ಅವರನ್ನು ಎದುರು ಹಾಕಿಕೊಂಡೆ. ರಾಜಕೀಯ ಲಾಭಕ್ಕೆ ನನ್ನ ಸಂಸಾರ ಹಾಳು ಮಾಡಲು ಮುಂದಾಗುತ್ತಿದ್ದಾರೆ. ನನ್ನ ಪತ್ನಿ ಜೊತೆ ಮಡಿಕೇರಿಯಲ್ಲಿದ್ದಾಗ ನನ್ನ ಬ್ಲ್ಯಾಕ್ಮೇಲ್ ಮಾಡಲು ಮುಂದಾದ್ರು. ಗಂಡನಾಗಿ ಹೆಂಡತಿ ಜೊತೆ ಇರುವ ಅಧಿಕಾರ ನನಗಿಲ್ಲವೇ? ವೈಯಕ್ತಿಕ ಜೀವನಕ್ಕೆ ರಾಜಕೀಯ ಬೆರಸಿದ್ರೆ ಹುಷಾರ್ ಎಂದು ಫೈರಿಂಗ್ ಸ್ಟಾರ್ ಹುಚ್ಚಾ ವೆಂಕಟ್ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ನನ್ನ ಮನೆಗೆ ಕರೆಂಟ್ ನೀಡಿಲ್ಲ. ಕುಕ್ಕರ್ ಪಡೆದುಕೊಂಡು ನನ್ನ ಮೇಲೆ ದ್ವೇಷ ಮಾಡುತ್ತಿದ್ದಾರೆ. ನಾನು ನನ್ನ ಹಳೆ ಹಾದಿ ಹಿಡಿದ್ರೇ ಯಾರಿಗೂ ಒಳೆದಲ್ಲ. ನನ್ನ ಹೆಂಡತಿ ಹಾಗೂ ನನ್ನ ತಂದೆಗಾಗಿ ನಾನು ಸುಮ್ಮನಿದ್ದೇನೆ. ನನ್ನ ಹೆಂಡತಿ ಐಶ್ವರ್ಯಗಾಗಿ ಜೈಲಿಗೆ ಹೋಗಲು ಸಿದ್ದ. ನಾನು ಪ್ರಾಮಾಣಿಕವಾಗಿರೋದೆ ತಪ್ಪಾ? ಎಂದು ವೆಂಕಟ್ ಫೇಸ್ ಬುಕ್ ಲೈವ್ ಮೂಲಕ ಮತ್ತೆ ತನ್ನ ಅವಾಜ್ ಹೊರಹಾಕಿದ್ದಾರೆ.

Comments are closed.