ಕರಾವಳಿ

ಗಾಯಗೊಂಡ ಗ್ಯಾರೆಜ್ ಮೆಕ್ಯಾನಿಕ್‌ಗೆ ಪೊಲೀಸ್ ಸಿಬ್ಬಂದಿಯಿಂದ ಪ್ರಥಮ ಚಿಕಿತ್ಸೆ!

Pinterest LinkedIn Tumblr

ಉಡುಪಿ: ವಾಹನ ರಿಪೇರಿ ಮಾಡುತ್ತಿದ್ದಾಗ ಗಾಯಗೊಂಡ ಗ್ಯಾರೇಜ್ ಮೆಕ್ಯಾನಿಕ್ ಓರ್ವರಿಗೆ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ತಮ್ಮ ವಾಹನದಲ್ಲಿದ್ದ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಿಂದ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಸಾಲಿಗ್ರಾಮದ ಗ್ಯಾರೇಜಿನಲ್ಲಿ ವಾಹನ ರಿಪೇರಿ ಮಾಡುವಾಗ ಅಲ್ಲಿನ ಮೆಕ್ಯಾನಿಕ್ ಕೈಗೆ ಗಾಯವಾಗಿ ರಕ್ತ‌ಒಸರಿತ್ತು. ಕೂಡಲೇ ಕೋಟ ಪೊಲೀಸ್ ಠಾಣೆಯ ಜೀಪು ಚಾಲಕ ಪ್ರಶಾಂತ್ ಪಡುಕೆರೆ ತಮ್ಮ ಇಲಾಖೆಯ ಜೀಪಿನಲ್ಲಿದ್ದ ಪ್ರಥಮ ಚಿಕಿತ್ಸೆ ಪೆಟ್ಟಿಗೆಯಿಂದ ಅಗತ್ಯ ಸಲಕರಣೆ ಬಳಸಿ ಆತನಿಗೆ ಚಿಕಿತ್ಸೆ ನೀಡಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದವರ್‍ಯಾರೋ ಫೋಟೋ ಕ್ಲಿಕ್ಕಿಸಿದ್ದು ಅದನ್ನು ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದು ಪೊಲೀಸ್ ಸಿಬ್ಬಂದಿಯ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Comments are closed.