ರಾಷ್ಟ್ರೀಯ

ಸೆಲ್ಫಿಯ ಹುಚ್ಚು…! ಕರಡಿಯೊಡನೆ ಸೆಲ್ಫಿ ತೆಗೆಯಲು ಹೋದ ಯುವಕ ಸಾವು … ವೀಡಿಯೋ ವೈರಲ್

Pinterest LinkedIn Tumblr

ನಬರಂಗ್ಪುರ(ಒಡಿಶಾ): ಪ್ರಾಣಿಗಳೊಡನೆ ಸೆಲ್ಫಿ ತೆಗೆಸಿಕೊಳ್ಳ ಹೋಗಿ ಅವಾಂತರ ಮಾಡಿಕೊಂಡ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿದೆ. ಇದೀಗ ಒಡಿಶಾದಲ್ಲಿ ಸಹ ಅಂತಹುದೇ ಘಟನೆ ನಡೆದಿದ್ದು ಯುವಕನೊಬ್ಬ ಕರಡಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿ ಮೃತಪಟ್ಟಿದ್ದಾನೆ.

ಕಾಟಪಾಡ್ ನಿಂದ ಪಾಪದಹಂಡಿಗೆ ಬೊಲೆರೋ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪ್ರಭು ಭಾತ್ರಾ ಕರಡಿ ದಾಳಿಗೆ ಒಳಗಾಗಿ ಸಾವನ್ನಪ್ಪಿದ ದುರ್ದೈವಿ.

ಟ್ಯಾಕ್ಷಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಪ್ರಭು ಭಾತ್ರಾ ವಿವಾಹ ಕಾರ್ಯಕ್ರಮ ಮುಗಿಸಿ ಸ್ನೇಹಿತರು, ಕುಟುಂಬದವರೊಡನೆ ವಾಪಾಸಾಗುತ್ತಿದ್ದಾಗ ಅರಣ್ಯ ಪ್ರದೇಶದಲ್ಲಿ ಗಾಯಗೊಂಡಿದ್ದ ಕರಡಿಯೊಂದನ್ನು ಕಂಡಿದ್ದಾನೆ. ತಕ್ಷಣ ಅದರ ಜತೆ ಸೆಲ್ಫಿ ತೆಗೆದುಕೊಳ್ಳಲು ಧಾವಿಸಿದ್ದಾನೆ. ಆಗ ಕರಡಿ ಅವನ ಮೇಲೆ ದಾಳಿ ನಡೆಸಿದೆ.

ಸಹ ಪ್ರಯಾಣಿಕರು ಆತನನ್ನು ಕರಡಿಯಿಂದ ಬಿಡಿಸಲು ಮುಂದಾದರೂ ಕರಡಿ ಮಾತ್ರ ಅವನನ್ನು ಬಿಡದೆ ಕಚ್ಚಿ ಗಾಯಗೊಳಿಸಿದೆ.

ಸಹ ಪ್ರಯಾಣಿಕರೊಬ್ಬರು ಈ ಎಲ್ಲಾ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.ಅಲ್ಲದೆ ಪ್ರಕರಣದ ಕುರಿತಂತೆ ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕಾಗಮಿಸಿ ಕರಡಿಯಿಂದ ಪ್ರಭು ಮೃತ ದೇಹವನ್ನು ರಕ್ಷಿಸಿದ್ದಾರೆ.

Comments are closed.