ಕ್ರೀಡೆ

ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವು

Pinterest LinkedIn Tumblr

ಇಂದೋರ್: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವು ಸಾಧಿಸಿದೆ.

ಶುಕ್ರವಾರ ರಾತ್ರಿ ಇಲ್ಲಿ ನಡೆದ ಪಂದ್ಯದಲ್ಲಿ ಈ ತಂಡ ಕಿಂಗ್ಸ್ ಇಲೆವನ್‌ ಪಂಜಾಬ್‌ ವಿರುದ್ಧ ಆರು ವಿಕೆಟ್‌ಗಳ ಜಯ ಸಾಧಿಸಿತು.

175 ರನ್‌ಗಳ ಗುರಿ ಬೆನ್ನತ್ತಿದ ತಂಡ 19ನೇ ಓವರ್‌ನಲ್ಲಿ ಗೆಲುವು ಸಾಧಿಸಿತು. ಈಶಾನ್‌ ಕಿಶನ್‌ 25, ಹಾರ್ದಿಕ್ ಪಾಂಡ್ಯ 23, ರೋಹಿತ್ ಶರ್ಮಾ 24 ಮತ್ತು ಕೃಣಾಲ್ ಪಾಂಡ್ಯ 31 ರನ್‌ ಗಳಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವನ್‌ ‘ದೈತ್ಯ ಬ್ಯಾಟ್ಸ್‌ಮನ್’ ಕ್ರಿಸ್ ಗೇಲ್ ಅವರ ಅರ್ಧಶತಕದ (50; 40ಎ, 6ಬೌಂ 1ಸಿ) ಬಲದಿಂದ ಸವಾಲಿನ ಮೊತ್ತ ಪೇರಿಸಿತು.

ತಂಡದ ಇನಿಂಗ್ಗ್‌ ಆರಂಭಿಸಿದ ಕನ್ನಡಿಗ ಕೆ.ಎಲ್. ರಾಹುಲ್ (24; 20ಎ,1ಬೌಂ,2ಸಿ) ಮತ್ತು ಗೇಲ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ ಅವರು 54 ರನ್ ಸೇರಿಸಿದರು. ಮುಂಬೈ ತಂಡದ ಸ್ಪಿನ್ನರ್ ಮಯಂಕ್ ಮಾರ್ಕಂಡೆ ಹಾಕಿದ ಏಳನೆ ಓವರ್‌ನಲ್ಲಿ ರಾಹುಲ್ ಔಟಾದರು.

ನಂತರ ಕ್ರೀಸ್‌ಗೆ ಬಂದ ಅನುಭವಿ ಆಟಗಾರ ಯುವರಾಜ್ ಸಿಂಗ್ 14 ಎಸೆತಗಳಲ್ಲಿ 14 ರನ್ ಗಳಿಸಿದರು. ಅದರಲ್ಲಿ ಒಂದು ಸಿಕ್ಸರ್‌ ಇತ್ತು. ಗೇಲ್ 12ನೇ ಓವರ್‌ನಲ್ಲಿ ಬೆನ್ ಕಟ್ಟಿಂಗ್ ಬೌಲಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್‌ಗೆ ಕ್ಯಾಚಿತ್ತರು.

ನಂತರ ಓವರ್‌ನಲ್ಲಿ ಯುವಿ ರನ್‌ ಔಟಾದರು. ಈ ಸಂದರ್ಭದಲ್ಲಿ ತಂಡದ ಮೊತ್ತವು ಕೇವಲ 96 ರನ್‌ಗಳಾಗಿದ್ದವು. ನಂತರ ಜೊತೆಗೂಡಿದ ಕರುಣ್ ನಾಯರ್ (23; 12ಎ,1ಬೌಂ, 2ಸಿ) ಮತ್ತು ಅಕ್ಷರ್ ಪಟೇಲ್ (13;12ಎ, 1ಸಿ) ನಾಲ್ಕನೇ ವಿಕೆಟ್‌ಗೆ 36 ರನ್‌ ಸೇರಿಸಿದರು. 16ನೇ ಓವರ್‌ನಲ್ಲಿ ಕರುಣ್ ಔಟಾದರು. ನಂತರದ ಓವರ್‌ನಲ್ಲಿ ಅಕ್ಷರ್ ಕೂಡ ಔಟಾದರು. ಕೊನೆಯಲ್ಲಿ ಮಯಂಕ್ ಅಗರವಾಲ್ (11: 7ಎ, 1ಸಿ) ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು.

ಸಂಕ್ಷಿಪ್ತ ಸ್ಕೋರ್

ಕಿಂಗ್ಸ್‌ ಇಲೆವನ್ ಪಂಜಾಬ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 174 (ಕೆ.ಎಲ್. ರಾಹುಲ್ 24, ಕ್ರಿಸ್‌ ಗೇಲ್ 50, ಯುವರಾಜ್ ಸಿಂಗ್ 14, ಕರುಣ್ ನಾಯರ್ 23, ಅಕ್ಷರ್ ಪಟೇಲ್ 13, ಮಾರ್ಕಸ್ ಸ್ಟೋಯಿನಸ್ 29, ಮಯಂಕ್ ಅಗರವಾಲ್ 11, ಮಿಚೆಲ್ ಮೆಕ್‌ಲೆಂಗಾನ್ 31ಕ್ಕೆ1, ಜಸ್‌ಪ್ರೀತ್ ಬೂಮ್ರಾ 19ಕ್ಕೆ1, ಹಾರ್ದಿಕ್ ಪಾಂಡ್ಯ 44ಕ್ಕೆ1, ಮಯಂಕ್ ಮಾರ್ಕಂಡೆ 29ಕ್ಕೆ1, ಬೆನ್ ಕಟ್ಟಿಂಗ್ 28ಕ್ಕೆ1);

ಮುಂಬೈ ಇಂಡಿಯನ್ಸ್‌: 19 ಓವರ್‌ಗಳಲ್ಲಿ 4ಕ್ಕೆ 176.

Comments are closed.