ರಾಷ್ಟ್ರೀಯ

ಜಿನ್ನಾ ಭಾವಚಿತ್ರ ವಿವಾದ: ಆಲಿಗಢದಲ್ಲಿ ಇಂಟರ್‌ನೆಟ್‌ ಅಮಾನತು

Pinterest LinkedIn Tumblr


ಆಲಿಗಢ, ಉತ್ತರ ಪ್ರದೇಶ : ಪಾಕ್‌ ಸ್ಥಾಪಕ ಮೊಹಮ್ಮದ್‌ ಅಲಿ ಜಿನ್ನಾ ಅವರ ಭಾವ ಚಿತ್ರ ವಿವಾದದಿಂದಾಗಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪ್ರಕ್ಷುಬ್ಧತೆ ತಲೆದೋರಿರುವ ಕಾರಣ ಆಲಿಗಢ ಜಿಲ್ಲೆಯಲ್ಲಿ ಇಂಟರ್‌ನೆಟ್‌ ಸೇವೆಯನ್ನು ಅಮಾನತುಗೊಳಿಸಲಾಗಿದೆ.

ಇಂದು ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ ನಾಳೆ ಶನಿವಾರ ಮಧ್ಯರಾತ್ರಿ 12 ಗಂಟೆಯ ವರೆಗೆ ಆಲಿಗಢ ಜಿಲ್ಲೆಯಲ್ಲಿ ಇಂಟರ್‌ನೆಟ್‌ ಸೇವೆ ಇರುವುದಿಲ್ಲ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಚಂದ್ರ ಭೂಷಣ್‌ ಸಿಂಗ್‌ ಹೇಳಿದ್ದಾರೆ.

ವದಂತಿಗಳನ್ನು ಹರಡುವವರ ಉಪಟಳವನ್ನು ತಡೆಯುವುದಕ್ಕಾಗಿ ಇಂಟರ್‌ನೆಟ್‌ ಸೇವೆ ಅಮಾನತುಗೊಳಿಸಲಾಗಿದೆ ಎಂದವರು ಹೇಳಿದರು.

-Udayavani

Comments are closed.