ರಾಷ್ಟ್ರೀಯ

ನಿಲ್ಲುವಂತೆ ಸಂಜ್ಞೆ ಮಾಡಿದ ಪೊಲೀಸರ ಮೇಲೆಯೇ ಕಾರು ಚಲಾಯಿಸಿದ ಭೂಪ ! ಈ ವೀಡಿಯೊ ನೋಡಿ…

Pinterest LinkedIn Tumblr

ಕಾಕಿನಾಡ : ಆಂದ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡದ ಚೆಕ್ ಪೋಸ್ಟ್ ಒಂದರಲ್ಲಿ ಕಳೆದ ರವಿವಾರ ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರ ಪೊಲೀಸರ ಪಾಲಿಗೆ ದುಃಸ್ವಪ್ನವಾಗಿ ಪರಿಣಮಿಸಿತ್ತು.

ಮದ್ಯದ ನಶೆಯಲ್ಲಿದ್ದನೆಂದು ಹೇಳಲಾದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಾರು ಚಲಾಯಿಸಿಕೊಂಡು ಬರುತ್ತಿರುವುದನ್ನು ಗಮನಿಸಿದ ಪೊಲೀಸರು ಆತನಿಗೆ ನಿಲ್ಲುವಂತೆ ಸಂಜ್ಞೆ ಮಾಡಿದರೂ ಆತ ನಿಲ್ಲದೆ ಪೊಲೀಸರ ಮೇಲೆಯೇ ವಾಹನ ಚಲಾಯಿಸಿದ ಪರಿಣಾಮ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.  ತನ್ನ ವಾಹನದೆದುರು ನಾಲ್ಕು ಮಂದಿ ಪೊಲೀಸರು ನಿಂತಿದ್ದರೂ ಕ್ಯಾರೇ ಅನ್ನದೆ ಮುಂದಕ್ಕೆ ಚಲಾಯಿಸಿಕೊಂಡು ಹೋದ ಆತ ಪೊಲೀಸರು ಇರಿಸಿದ ಬ್ಯಾರಿಕೇಡ್ ಒಂದಕ್ಕೆ ತನ್ನ ವಾಹನವನ್ನು ಗುದ್ದಿದ್ದಾನೆ. ಈ ಸಂದರ್ಭ ಪೊಲೀಸ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು ಗಾಯಾಳು ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Comments are closed.