ಕರಾವಳಿ

ದೈವಸ್ಥಾನಗಳಿಗೆ 50 ಲಕ್ಷ ರೂ.ಗೂ ಅಧಿಕ ಅನುದಾನ ಬಿಡುಗಡೆ ಮಾಡಿದ್ದೇನೆ : ಶಾಸಕ ಮೊಹಿಯುದ್ದೀನ್ ಬಾವಾ

Pinterest LinkedIn Tumblr

ಮಂಗಳೂರು, ಮಾರ್ಚ್ 28: ಮಂಗಳೂರು ಉತ್ತರ ವಿಧಾನಸಭಾ (ಸುರತ್ಕಲ್) ಕ್ಷೇತ್ರದ ಶಾಸಕ ಮೊಹಿಯುದ್ದೀನ್ ಬಾವಾ ಅವರು ಬುಧವಾರ ತಮ್ಮ ನಿವಾಸದ ಕಚೇರಿಯಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದರು.ವಿವಿಧ ಕ್ಷೇತ್ರಗಳ ಸಮಸ್ಯೆಗಳ ಕುರಿತಾಗಿ ಕ್ಷೇತ್ರದ ಜನರಿಂದ ಮನವಿ ಸ್ವೀಕರಿಸಿದರು.

ಈ ಸಂದರ್ಭ ಮಾತನಾಡಿದ ಅವರು ಇದೀಗ ಚುನಾವಣೆ ಘೋಷಣೆಯಾಗಿದ್ದು, ಯಾವುದೇ ಅನುದಾನ ನೀಡುವ ಬಗ್ಗೆ ಹೇಳುವುದಿಲ್ಲ. ಐದು ವರ್ಷದ ಹಿಂದೆ ತಾನು ನೀಡಿದ ಭರವಸೆಗಳನ್ನು ಆದ್ಯತಾ ನೆಲೆಯಲ್ಲಿ ಪೂರ್ಣಗೊಳಿಸಿದ್ದೇನೆ.

ಆದರೂ ಇನ್ನಷ್ಟು ಅಭಿವೃದ್ಧಿ ಕೆಲಸ ಕಾರ‍್ಯಗಳು ನಡೆಯಬೇಕಿದೆ. ಈಗಾಗಲೇ ನಾನಾ ದೈವಸ್ಥಾನಗಳಿಗೆ ಒಟ್ಟು ೫೦ ಲಕ್ಷ ರೂ.ಗೂ ಅಧಿಕ ಅನುದಾನವನ್ನು ಬಿಡುಗಡೆ ಗೊಳಿಸಲಾಗಿದೆ. ಕೆಲವೊಂದು ಕ್ಷೇತ್ರಗಳಿಗೆ ಈಗಾಗಲೇ ಅನುದಾನ ದೊರೆತರೆ ಇನ್ನಷ್ಟು ಕ್ಷೇತ್ರಗಳಿಗೆ ಹಂತ ಹಂತವಾಗಿ ದೊರೆಯಲಿದೆ ಎಂದರು.

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಇತಿಹಾಸದಲ್ಲೇ ಅತೀ ಹೆಚ್ಚು ಅನುದಾನ ಧಾರ್ಮಿಕ ಕೇಂದ್ರ, ಸಮುದಾಯ ಭವನಗಳ ಅಭಿವೃದ್ಧಿಗೆ ನೀಡಲಾಗಿದೆ ಎಂದರು.

ಈಗಾಗಲೇ ಹಕ್ಕುಪತ್ರ, ನಿವೇಶನ ನೀಡುವ ಕೆಲಸ ಆರಂಭಗೊಂಡಿದೆ. ಹಕ್ಕು ಪತ್ರ ನೀಡಲು ಇದ್ದ ತಾಂತ್ರಿಕ ತೊಂದರೆಯನ್ನು ನಿವಾರಿಸಿ ಒಂದೂವರೆ ದಶಕದ ಬಳಿಕ ಇದೀಗ ಮತ್ತೆ ಹಕ್ಕಕು ಪತ್ರ ನೀಡುವ ಕೆಲಸಕ್ಕೆ ಚಾಲನೆ ನೀಡಲಾಗಿದೆ.

ಈ ಹಿಂದಿನ ಸರಕಾರ ಅಕ್ರಮವಾಗಿ ಕುಳಿತ ಜನರನ್ನು ಜೈಲಿಗೆ ಕಳುಹಿಸುವ ಕೆಲಸವನ್ನು ಮಾಡಲು ಮುಂದಾಗಿತ್ತು. ಆದರೆ ಕಾಂಗ್ರೆಸ್ ಸರಕಾರ ಜೈಲ್‌ಗೆ ಕಳುಹಿಸುವ ಬದಲು ಹಕ್ಕು ಪತ್ರ ನೀಡುವ ಮೂಲಕ ನೆಮ್ಮದಿಯ ಬದುಕನ್ನು ಕಲ್ಪಿಸಿದೆ ಎಂದರು.

ರಾಜೇಶ್ ಕುಳಾಯಿ, ವೇಣು ವಿನೋದ್ ಶೆಟ್ಟಿ ,ಹಿದಾಯಿತ್ ಮತ್ತಿತರರು ಉಪಸ್ಥಿತರಿದ್ದರು.

Comments are closed.