ರಾಷ್ಟ್ರೀಯ

ಮಗಳನ್ನು ಅತ್ಯಾಚಾರಗೈದ ಆರೋಪಿಗೆ ಪೊಲೀಸರ ಮುಂದೆಯೇ ಹಿಗ್ಗಾಮುಗ್ಗಾ ಥಳಿಸಿದ ತಾಯಿ- ವಿಡಿಯೋ ವೈರಲ್

Pinterest LinkedIn Tumblr

ಭೋಪಾಲ್: ಪೊಲೀಸರ ಬಂಧನದಲ್ಲಿದ್ದಾಗಲೇ ಅತ್ಯಾಚಾರ ಆರೋಪಿಯನ್ನು ಸಂತ್ರಸ್ತೆಯ ತಾಯಿ ಹಿಗ್ಗಾಮುಗ್ಗಾ ಥಳಿಸಿದ್ದು, ಈಗ ಆ ವಿಡಿಯೋ ವೈರಲ್ ಆಗಿದೆ.

ಈ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದ್ದು, ವಿಡಿಯೋದಲ್ಲಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ತಾಯಿ ಆರೋಪಿಯ ಕೆನ್ನೆಗೆ ಬಾರಿಸಿ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿರೋದನ್ನ ಕಾಣಬಹುದು.

ಮಹಿಳೆಯ ಮಗಳನ್ನು ಅತ್ಯಾಚಾರ ಮಾಡಿದ ಆರೋಪದ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆದರೆ ಸಂತ್ರಸ್ತೆಯ ತಾಯಿ ಪೊಲೀಸ್ ಠಾಣೆಯ ಬಳಿ ಬಂದು ಇಬ್ಬರು ಪೊಲೀಸರ ಮುಂದೆಯೇ ಆರೋಪಿಗೆ ಹೊಡೆದಿದ್ದಾರೆ. ಅಷ್ಟೇ ಅಲ್ಲದೇ ಆತನ ಕೂದಲು ಹಿಡಿದು, ಶರ್ಟ್ ಹಿಡಿದು ಎಳೆದಾಡಿ ಪದೇ ಪದೇ ಹೊಡೆದಿದ್ದಾರೆ.

ಆರೋಪಿಗೆ ಮಹಿಳೆ ಥಳಿಸುತ್ತಿದ್ದ ದೃಶ್ಯವನ್ನು ಯಾರೋ ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದು ಸದ್ಯಕ್ಕೆ ಈ ವಿಡಿಯೋ ವೈರಲ್ ಆಗಿದೆ. ಆರೋಪಿಯ ಬಗ್ಗೆ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ.

Comments are closed.