ರಾಷ್ಟ್ರೀಯ

ನಕಲಿ ರೇಷನ್ ಕಾರ್ಡ್ ಹಾವಳಿಗೆ ಫುಲ್ ಸ್ಟಾಪ್ ನೀಡಲು ಕಾರ್ಡ್‌ಗೆ ಗುರುತಿನ ಸಂಖ್ಯೆ ಶೀಘ್ರದಲ್ಲೇ ಸಿದ್ಧ

Pinterest LinkedIn Tumblr

ಸಾಮಾನ್ಯ ಜನರಿಗಾಗಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರ್ತಿದೆ. ಇದ್ರ ಜೊತೆಗೆ ಹಳೆ ವ್ಯವಸ್ಥೆಯನ್ನು ಬದಲಾಯಿಸುವ ಕೆಲಸವನ್ನೂ ಮಾಡಲಾಗ್ತಿದೆ. ಇದೇ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇನ್ನೊಂದು ಮಹತ್ವದ ಹೆಜ್ಜೆ ಇಡುತ್ತಿದೆ.

ಮೋದಿ ಸರ್ಕಾರ ಹೊಸದೊಂದು ಯೋಜನೆ ಶುರು ಮಾಡ್ತಿದೆ. ಇದ್ರ ಅಡಿ ದೇಶದಾದ್ಯಂತ ಒಂದೇ ರೇಷನ್ ಕಾರ್ಡ್ ಬಳಸಬಹುದಾಗಿದೆ. ಸರ್ಕಾರ ಆಧಾರ್ ನಂಬರ್ ನಂತೆಯೇ ರೇಷನ್ ಕಾರ್ಡ್ ಗೆ ಒಂದು ಪ್ರತ್ಯೇಕ ಗುರುತಿನ ಸಂಖ್ಯೆ ನೀಡಲು ಸಿದ್ಧವಾಗಿದೆ. ಇದು ನಕಲಿ ರೇಷನ್ ಕಾರ್ಡ್ ಅಬ್ಬರಕ್ಕೆ ಫುಲ್ ಸ್ಟಾಪ್ ನೀಡಲಿದೆ.

ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ವ್ಯಕ್ತಿ ನಕಲಿ ರೇಷನ್ ಕಾರ್ಡ್ ತಯಾರಿಸಿದ್ರೂ ಇದು ಪತ್ತೆ ಮಾಡಲಿದೆ. ಇದ್ರ ಇನ್ನೊಂದು ಲಾಭವೆಂದ್ರೆ ಫಲಾನುಭವಿ ದೇಶದ ಯಾವುದೇ ರೇಷನ್ ಅಂಗಡಿಯಲ್ಲಿ ಬೇಕಾದ್ರೂ ರೇಷನ್ ಪಡೆಯಬಹುದಾಗಿದೆ. ಮುಂದಿನ ತಿಂಗಳಿನಿಂದ ಇದ್ರ ಕೆಲಸ ಶುರುವಾಗಲಿದೆ.

Comments are closed.