ಉಡುಪಿ: ಶೀರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳು ರಾಜಕೀಯಕ್ಕೆ ಎಂಟ್ರಿಯಾಗುತ್ತಿದ್ದಂತೆಯೇ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿದೆ. ಸ್ವಾಮೀಗಳು ಹೇಳಿದ್ದರೆನ್ನಲಾದ ವಿವಾದಾತ್ಮಕ ವಿಡಿಯೋ ಸದ್ಯ ಜಾಲತಾಣದಲ್ಲಿ ವೈರಲ್ ಆಗಿದ್ದು ರಾಜ್ಯದ ಸುದ್ದಿ ವಾಹಿನಿಯೊಂದು ಇದನ್ನು ಬಿತ್ತರಿಸಿ ದೊಡ್ಡ ಚರ್ಚೆಯೇ ನಡೆದಿದೆ.
ಉಡುಪಿಯ ಅಷ್ಟಮಠಗಳಲ್ಲಿ ಎಲ್ಲವೂ ಸರಿಯಿಲ್ಲ, ನಾನು ಕೂಡ ಸರಿಯಿಲ್ಲ. ಎನ್ನುವುದು ಮಾತ್ರವಲ್ಲದೇ ಕೆಲವು ವೈಯಕ್ತಿಕ ಸಂಭಾಷಣೆಗಳು ಆ ವಿಡಿಯೋ ತುಣುಕಿನಲ್ಲಿದೆ. ಮಠದ ಬಗೆಗಿನ ರಹಸ್ಯ ವಿಚಾರಗಳು ಆ ಸಂಭಾಷಣೆಯಲ್ಲಿದೆ.

ಆದರೇ ಈ ಬಗ್ಗೆ ಮಾಧ್ಯಮದ ಜೊತೆಗೆ ಮಾತನಾಡಿದ ಶ್ರೀಗಳು, ಇದೊಂದು ಫೇಕ್ ವೀಡಿಯೋ, ಡಬ್ಬಿಂಗ್ ಮಾಡಿ ಹರಿಯಬಿಡಲಾಗಿದೆ. ವೈಜ್ಞಾನಿಕ ಯುಗದಲ್ಲಿ ಏನನ್ನೂ ಮಾಡಲು ಸಾಧ್ಯ. ಆ ಚಾನೆಲ್ ಗೆ ಈಗ ವೀಡಿಯೋ ಹೇಗೆ ಸಿಕ್ಕಿತೋ ಗೊತ್ತಿಲ್ಲ. ಚಾನೆಲ್ ನವರಿಗೆ ಈ ವೀಡಿಯೋ ಬಗ್ಗೆ ಮಾಹಿತಿ ಇಲ್ವೋ ಏನೋ..? 6-7 ತಿಂಗಳ ಹಿಂದೆಯೇ ನಾನು ಇದರ ವಿರುದ್ಧ ಕೋರ್ಟ್ ಗೆ ಹೋಗಿದ್ದೇನೆ ಎಂದರು.
ನಾನು ರಾಜಕೀಯಕ್ಕೆ ಹೋಗೋದು ಸಹಿಸಲಾಗದೆ ಈ ರೀತಿ ಮಾಡಲಾಗುತ್ತಿದೆ. ಇಂತಹ ಅಪಪ್ರಚಾರಗಳು ಸ್ವಾಭಾವಿಕ, ಮುಂದೆ ಇನ್ನಷ್ಟು ಬರಬಹುದು. ಗುಂಡು ಹೊಡೆದರೂ ನಾನು ಸಾಯುವುದಿಲ್ಲ. ನನ್ನೊಂದಿಗೆ ಮುಖ್ಯಪ್ರಾಣ ಇದ್ದಾನೆ. ನಾನು ಎಲೆಕ್ಷನ್ ನಿಂತೇ ನಿಲ್ಲುತ್ತೇನೆ. ವೃತ್ತಿ ವೈಷಮ್ಯದಿಂದಲೂ ಈ ರೀತಿ ಮಾಡಿರಬಹುದು. ಮುಂದಿನ ದಿನದಲ್ಲಿ ಇದೆಲ್ಲಕ್ಕೂ ಕಾನೂನಿನ ಮೂಲಕ ಉತ್ತರಿಸುವೆ. ಈ ರೀತಿ ಆಗಿರುವುದು ಅಷ್ಟಮಠದ ಇತರೆ ಸ್ವಾಮೀಜಿಗಳಿಗೂ ಗೊತ್ತು ಎಂದಿದ್ದಾರೆ.
Comments are closed.