ಕರಾವಳಿ

ಗೋಪಾಡಿ: ಗಾಯಗೊಂಡ ಜಿಂಕೆಮರಿಯ ರಕ್ಷಣೆ!

Pinterest LinkedIn Tumblr

ಕುಂದಾಪುರ: ನಾಯಿ ಕಚ್ಚಿದ್ದು ಮಾತ್ರವಲ್ಲದೇ ಅಟ್ಟಿಸಿಕೊಂಡು ಬಂದು ಅಸ್ವಸ್ಥಗೊಂಡ ಜಿಂಕೆಮರಿಗೆ ಸ್ಥಳೀಯರು ಉಪಚರಿಸಿ ಅರಣ್ಯ ಇಲಾಖೆಯ ವಶಕ್ಕೆ ನೀಡಿದ ಘಟಎ ಕುಂದಾಪುರ ತಾಲೂಕಿನ ಗೋಪಾಡಿಯಲ್ಲಿ ನಡೆದಿದೆ.

ನಾಯಿಯೊಂದು ಜಿಂಕೆಯನ್ನು ಅಟ್ಟಿಸಿಕೊಂಡು ಬಂದಿದ್ದು ಬೆದರಿದ ಜಿಂಕೆ ಅಸ್ವಸ್ಥಗೊಂಡು ಬಿದ್ದಿತ್ತು. ಇದನ್ನು ಗಮನಿಸಿದ ಗೋಪಾಡಿಯ ಜೀವಿ ಆರ್ಟ್ಸ್ ಮಾಲಿಕ ವೆಂಕಟೇಶ ಆಚಾರ್ ಮತ್ತು ಇತರರು ಜಿಂಕೆಯನ್ನು ಉಪಚರಿಸಿ ಬಳಿಕ ಅರಣ್ಯ ಇಲಾಹೆಗೆ ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆಯವರು ಪಶು ವೈದ್ಯರ ಮೂಲಕ ಜಿಂಕೆಗೆ ಚಿಕಿತ್ಸೆ ಕೊಡಿಸಿ ಬಳಿಕ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

Comments are closed.