ಕರಾವಳಿ

ಮಹದಾಯಿ ಹೋರಾಟಗಾರರ ಮೇಲೆ ಕೇಸ್: ಕುಂದಾಪುರದಲ್ಲಿ ಬಿಗ್ ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ಹೇಳಿದ್ದೇನು? (Video)

Pinterest LinkedIn Tumblr

ಕುಂದಾಪುರ: ಕರ್ನಾಟಕ ಸರಕಾರವು ಮಹದಾಯಿ ಹೋರಾಟಗಾರರ ಮೇಲೆ ಮತ್ತೆ ಪ್ರಕರಣ ಜಾರಿಗೊಸಿದೆ. ಈ ಹಿಂದೆ ಹೋರಾಟಗಾರರ ಮೇಲೆ ಕೇಸು ದಾಖಲು ಮಾಡುವುದಿಲ್ಲವೆಂದರೂ ಕೂಡ ನವಲಗುಂದ ಜೆ.ಎಂ.ಎಫ್.ಸಿ ನ್ಯಾಯಾಲಯ 13 ಜನರ ಮೇಲೆ ಸರಕಾರಿ ಸೊತ್ತು ನಾಶದ ಪ್ರಕರಣ ದಾಖಲಿಸಿದೆ. ಈ ಪ್ರಕರಣವನ್ನು ಕೂಡಲೇ ಸರಕಾರವು ಹಿಂಪಡೆಯಬೇಕು ಎಂದು ಬಿಗ್‌ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ಹೇಳಿದರು.

ಕುಂದಾಪುರದ ವಕ್ವಾಡಿಗೆ ಕಾರ್ಯಕ್ರಮ ನಿಮಿತ್ತ ಆಗಮಿಸಿದ ಅವರು ‘ಕನ್ನಡಿಗ ವರ್ಲ್ಡ್’ ಜೊತೆ ಮಾತನಾಡಿದರು.

ನೀರಿನ ವಿಚಾರವನ್ನಿಟ್ಟುಕೊಂಡು ಯಾವುದೇ ರಾಜಕೀಯ ಮಾಡುವುದು ಸರಿಯಲ್ಲ. ಜನರು ಹಣ ಕೇಳುತ್ತಿಲ್ಲ, ಸಾಲಮನ್ನ ಕೇಳುತ್ತಿಲ್ಲ. ಮನುಷ್ಯತ್ವದ ದೃಷ್ಟಿಕೋನವನ್ನಿಟ್ಟುಕೊಂಡು ಮಹಾದಾಯಿ ನೀರನ್ನು ಕರ್ನಾಟಕಕ್ಕೆ ಬಿಡಬೇಕಿದೆ. ರೈತರು ಕೇಳುವ ನೀರನ್ನು ಖುಷಿಯಿಂದ ನೀಡಬೇಕು. ಮುಂದಿನ ದಿನದಲ್ಲಿ ಈ ಬಗ್ಗೆ ಪ್ರಧಾನಿಯವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸುವ ಪ್ರಯತ್ನ ಮಾಡುತ್ತೇನೆ. ಈ ಹಿಂದೆ ಪತ್ರ ಮುಖೇನ ಸಂಪರ್ಕ ಮಾಡಿದ್ದಲ್ಲದೇ ಕಛೇರಿಯವರ ಬಳಿ ದೂರವಾಣಿಯಲ್ಲಿ ಮಾತನಾಡಿದ್ದು ಪ್ರಧಾನಿ ಭೇಟಿ ಬಗ್ಗೆ ಒಪ್ಪಿಗೆ ಸೂಚಿಸಿದ್ದಾರೆ. ಮದದಾಯಿ ವಿಚಾರವಾಗಿ ಯಾವುದೇ ಕ್ಷಣದಲ್ಲೂ ಅಹಿಂಸಾತ್ಮಕವಾಗಿರುವ ಸಾತ್ವಿಕ ಹೋರಾಟಕ್ಕೆ ನಾನು ಸದಾ ಸಿದ್ಧನಿರುವೆ ಎಂದು ಅವರು ಈ ಸಂದರ್ಭ ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ಪ್ರಥಮ್, ರೈತರು ತಮ್ಮ ಹಕ್ಕು ಕೀಳಿದ್ದಾರೆ. ಸರಕಾರದ ಈ ಕ್ರಮವನ್ನು ನಾವು ಖಂಡಿಸುತ್ತೇವೆ. ಕುಡಿಯುವ ನೀರು ಕೇಳುತ್ತಿರುವುದೇ ಹೊರತು ಬಿಸ್ಲೇರಿ ನೀರನ್ನು ಕೇಳುತ್ತಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದರು.

Comments are closed.