ರಾಷ್ಟ್ರೀಯ

ವರದಕ್ಷಿಣೆಯ ಆಸೆಗಾಗಿ ಪುರುಷನ ವೇಷದಲ್ಲಿ ಇಬ್ಬರು ಮಹಿಳೆಯರನ್ನು ವಿವಾಹವಾದ ಮಹಿಳೆ ! ಮುಂದೇನು ಮಾಡಿದಳು ನೋಡಿ…

Pinterest LinkedIn Tumblr

ಡೆಹ್ರಾಡೂನ್ : ಪುರುಷನ ವೇಷ ಧರಿಸಿ ಇಬ್ಬರು ಯುವತಿಯರನ್ನು ವರದಕ್ಷಿಣೆಯ ಆಸೆಗಾಗಿ ವಿವಾಹವಾದ ಮಹಿಳೆಯೊಬ್ಬಳು ಇದೀಗ ಜೈಲುಗಂಬಿ ಎಣಿಸುತ್ತಿದ್ದಾಳೆ. ಆರೋಪಿಯನ್ನು ಕೃಷ್ಣ ಸೇನ್ ಅಲಿಯಾಸ್ ಸ್ವೀಟಿ ಸೇನ್ ಎಂದು ಗುರುತಿಸಲಾಗಿದ್ದು ಆಕೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಧಂಪುರ್ ಎಂಬ ಗ್ರಾಮದವಳಾಗಿದ್ದಾಳೆ. ಆಕೆಯನ್ನು ಉತ್ತರಾಖಂಡ ಪೊಲೀಸರು ನೈನಿತಾಲದಲ್ಲಿ ಬಂಧಿಸಿದ್ದು ತನ್ನ ಇಬ್ಬರು ಹೆಂಡಿರಲ್ಲಿ ಒಬ್ಬಳನ್ನು ವರದಕ್ಷಿಣೆಗಾಗಿ ಪೀಡಿಸಿದ ಆರೋಪ ಆಕೆಯ ಮೇಲಿದೆ.

ಪುರುಷರಂತೆ ಫೋಟೋ ತೆಗೆಸಿಕೊಂಡು ಫೇಸ್ ಬುಕ್ ಖಾತೆಯೊಂದನ್ನು ಕೃಷ್ಣ ಸೇನ್ ಎಂಬ ಹೆಸರಿನಲ್ಲಿ ತೆರೆದು ಯುವತಿಯರನ್ನು ಸೆಳೆಯುವ ಕಾರ್ಯವನ್ನು ಸ್ವೀಟಿ ಮಾಡುತ್ತಿದ್ದಳು. ಹಲವಾರು ಮಂದಿಯೊಡನೆ ಸಂದೇಶ ವಿನಿಮಯ ಮಾಡುತ್ತಿದ್ದ ಆಕೆ 2014ರಲ್ಲಿ ತಾನು ಫೇಸ್ ಬುಕ್ ಮುಖಾಂತರ  ಗೆಳೆತನ ಸಂಪಾದಿಸಿದ ಹಲದ್ವಾನಿ ಪ್ರದೇಶದ ಯುವತಿಯೊಬ್ಬಳನ್ನು ಭೇಟಿಯಾಗಲು ಬಂದು ಆಕೆಯ ಕುಟುಂಬದ ಜತೆ ಮಾತನಾಡಿ ತನ್ನನ್ನು ಅಲಿಘರ್ ನ ಸಿಎಲ್‍ಎಫ್ ಬಲ್ಬ್ ತಯಾರಿ ಉದ್ಯಮಿಯೊಬ್ಬನ ಪುತ್ರನೆಂದು ಪರಿಚಯಿಸಿದ್ದಳು. ಇಬ್ಬರ ಮದುವೆಯಾದ ನಂತರ ಆಕೆ ಸ್ನಾತ್ತಕೋತ್ತರ ಪದವೀಧರೆಯಾದ ಪತ್ನಿಗೆ ಹೊಡೆಯಲು ಆರಂಭಿಸಿ ಫ್ಯಾಕ್ಟರಿಯೊಂದನ್ನು ಸ್ಥಾಪಿಸಲೆಂದು ಹುಡುಗಿಯ ಕುಟುಂಬದಿಂದ ರೂ 8.5 ಲಕ್ಷ ಪಡೆದಿದ್ದಳು.

ಮುಂದೆ ಎಪ್ರಿಲ್ 2016ರಲ್ಲಿ ಕಲಧುಂಗಿ ಪಟ್ಟಣದ ಇನ್ನೊಬ್ಬ ಯುವತಿಯ ಜತೆ ಗೆಳೆತನ ಸಂಪಾದಿಸಿ ಆಕೆಯನ್ನೂ ವಿವಾಹವಾಗಿದ್ದಳು. ಆಶ್ಚರ್ಯವೆಂಬಂತೆ ಎರಡನೇ ಪತ್ನಿ ಆಕೆಯ ಮೊದಲ ವಿವಾಹದ ಸಂದರ್ಭ ಹಾಜರಿದ್ದಳು. ಇಬ್ಬರು ಪತ್ನಿಯರನ್ನು ಹಲ್ದವಾಣಿ ಎಂಬಲ್ಲಿ ಬಾಡಿಗೆ ಕೊಠಡಿಯೊಂದರಲ್ಲಿ ಆಕೆ ಇರಿಸಿದ್ದಳು.

ಎರಡನೇ ಪತ್ನಿಗೆ ತನ್ನ ಪತಿ ಪುರುಷನಲ್ಲವೆಂದು ತಿಳಿದಾಗ ಆಕೆಗೆ ಹಣದ ಆಮಿಷವೊಡ್ಡಿ ಸುಮ್ಮನಾಗಿಸಿದ್ದರೂ ಕೊನೆಗೆ ಮೊದಲ ಪತ್ನಿ ಪೊಲೀಸರಿಗೆ ದೂರು ನೀಡಿದ ನಂತರ ಕೃಷ್ಣ ಸೇನ್ ಬಂಧಿಯಾಗಿದ್ದಳು.

ತಾನು ಚಿಕ್ಕಂದಿನಿಂದಲೂ ಗಂಡುಬೀರಿಯಾಗಿದ್ದು ಪುರುಷರಂತೆ ಬೈಕ್ ಓಡಿಸುವುದು, ಸಿಗರೇಟ್ ಸೇದುವುದು ಮುಂತಾದವುಗಳನ್ನು ಮಾಡುತ್ತಿದ್ದುದಾಗಿ ಬಾಯ್ಬಿಟ್ಟಿದ್ದಳು. ಮದುವೆಯಾದ ನಂತರ ತನ್ನ ಪತ್ನಿಯರು ತನ್ನ ದೇಹ ನೋಡದಂತೆ ಹಾಗೂ ಮುಟ್ಟದಂತೆ ಎಚ್ಚರಿಕೆ ವಹಿಸಿದ್ದಾಗಿ ಬಹಿರಂಗ ಪಡಿಸಿದ್ದಾಳೆ.

Comments are closed.