ಕರ್ನಾಟಕ

ಸಾಮಾಜಿಕ ಮಾಧ್ಯಮಗಳ ‘ಫೇಕ್‌ ಅಕೌಂಟ್‌’ ಕುರಿತು ರಮ್ಯಾ ಪಾಠ? ಟ್ವಿಟರ್‌ನಲ್ಲಿ ವಿಡಿಯೊ ವೈರಲ್‌

Pinterest LinkedIn Tumblr

ಬೆಂಗಳೂರು: ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಹಾಗೂ ಸಂವಹನ ಘಟಕದ ಮುಖ್ಯಸ್ಥೆ ರಮ್ಯಾ ಫೇಸ್‌ಬುಕ್‌, ಟ್ವಿಟರ್‌ ‘ಫೇಕ್‌’ ಅಕೌಂಟ್‌ ಕುರಿತು ಮಾತನಾಡಿರುವ ವಿಡಿಯೊ ವೈರಲ್‌ ಆಗಿದೆ.

‘ಒಂದೇ ಹೆಸರಿನಲ್ಲಿ ಎರಡು ಮೂರು ಅಕೌಂಟ್‌ಗಳನ್ನು ಹೊಂದಬಹುದು. ಅದರಲ್ಲಿ ತಪ್ಪಿಲ್ಲ…ಒಂದು ನಿಮ್ಮ ಹೆಸರಿನಲ್ಲಿ ಇನ್ನೊಂದಿ ನಿಮ್ಮ…’ ಹೀಗೆ ರಮ್ಯಾ ತಮ್ಮ ಪಕ್ಷದ ಕಾರ್ಯಕರ್ತರಿಗೆ ಸಾಮಾಜಿಕ ಮಾಧ್ಯಮಗಳ ನಿರ್ವಹಣೆ ಕುರಿತು ನೀಡಿರುವ ಸಲಹೆ ಈ ವಿಡಿಯೊದಲ್ಲಿ ದಾಖಲಾಗಿದೆ.

ಟ್ವಿಟರ್‌ನಲ್ಲಿ ವೈರಲ್‌ ಆಗಿರುವ ಈ ವಿಡಿಯೊ ಅನ್ನು ನಟ ಜಗ್ಗೇಶ್‌, ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪಾ ಗಣೇಶ್‌ ಸೇರಿ ಅನೇಕರು ಮರು ಟ್ವೀಟಿಸಿ, ‘ಸುಳ್ಳಿಗೂ ಕಾಂಗ್ರೆಸ್‌ಗೂ ಅವಿನಾಭಾವ ಸಂಬಂಧ’ ಎಂದು ಟೀಕಿಸಿದ್ದಾರೆ.

ಸುಳ್ಳಿಗೂ ಕಾಂಗ್ರೆಸ್‌ಗೂ ಅವಿನಾಭಾವ ಸಂಬಂಧ. ಯಾವಾಗಲೂ ಬೇರೊಬ್ಬರ ತಪ್ಪು ಹುಡುಕುವ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದ ಅದ್ಯಕ್ಷೆ, ನಶೆ ರಾಣಿ ರಮ್ ರವರ ನಿಜಬಣ್ಣಇದು.ಸಾಮಾಜಿಕ ಜಾಲತಾಣಗಳಲ್ಲಿ ತಾವೇ ಸ್ವತಃ ಅನೇಕ ನಕಲಿಖಾತೆ ಹೊಂದಿರುವುದಲ್ಲದೇ ತಮ್ಮ ಬೆಂಬಲಿಗರಿಗೂ ನಕಲಿ ಖಾತೆ ಮೂಲಕ ಬಿಜೆಪಿಯ ಬಗ್ಗೆ ತಪ್ಪುಮಾಹಿತಿ ರವಾನಿಸುವಂತೆ ಹೇಳುತ್ತಿರುವ

ರಾಜಕೀಯ ಪಕ್ಷಗಳು ಸಾಮಾಜಿಕ ಮಾಧ್ಯಮಗಳನ್ನು ಚುನಾವಣಾ ಪ್ರಚಾರ ಹಾಗೂ ವಿರೋಧ ಪಕ್ಷಗಳ ವಿರುದ್ಧ ಟೀಕಾ ಪ್ರಹಾರಕ್ಕೆ ಪ್ರಮುಖ ಸಾಧನವಾಗಿ ಬಳಸಿಕೊಳ್ಳುತ್ತಿವೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಪಕ್ಷಗಳು ಸಾಮಾಜಿಕ ಮಾಧ್ಯಮಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಲು ನಿರ್ಧರಿಸಿದ್ದು, ಬೂತ್‌ ಮಟ್ಟದಿಂದ ಕಾರ್ಯಕರ್ತರಿಗೆ ಈ ಕುರಿತು ತರಬೇತಿ ನೀಡುತ್ತಿವೆ.

ಇಂಥದ್ದೇ ಕಾರ್ಯಾಗಾರವೊಂದರಲ್ಲಿ ರಮ್ಯಾ ಕಾರ್ಯಕರ್ತರಿಗೆ ಮಾಹಿತಿ ನೀಡಿರುವುದನ್ನು ಇಲ್ಲಿ ಗಮನಿಸಬಹುದು. ಟ್ವಿಟರ್‌, ಫೇಸ್‌ಬುಕ್‌ನಲ್ಲಿ ನಕಲಿ ಅಕೌಂಟ್‌ಗಳು, ಒಂದಕ್ಕಿಂತ ಹೆಚ್ಚು ಅಕೌಂಟ್‌ ತೆರೆಯುವ ಕುರಿತು ಮಾತನಾಡಿದ್ದಾರೆ. ಇದು ಎಡಿಟ್‌ ಮಾಡಿರುವ ವಿಡಿಯೊ ಆಗಿದ್ದು, ರಮ್ಯ ಅವರ ಮಾತು ಪೂರ್ಣಗೊಳ್ಳುವ ಮೊದಲೇ ಅಂತ್ಯಗೊಳ್ಳುತ್ತದೆ.

‘ಕಣ್ಣಗಲಿಸಿ ನೋಡಿ ಫೇಕ್‌ ಅಕೌಂಟ್‌ ಬಗ್ಗೆ ಪಾಠ ಕಲಿಸುತ್ತಿರುವ ಸಭ್ಯಸ್ಥೆ ಭಾರತದ ನಾಗರೀಕ ಕುಲವಂತರು! ಇವಳ ಪಾಠಕಲಿತು ನೆನ್ನೆಯಿಂದ ಸಾಮಾಜಿಕ ತಾಣದಲ್ಲಿ ವಾಂತಿ ಮಾಡುತ್ತಿರುವವರು ಇವರೆ..’ ಎಂದು ಜಗ್ಗೇಶ್‌ ಟ್ವೀಟ್‌ ಮೂಲಕ ಟೀಕಿಸಿದ್ದಾರೆ.

‘ಬೇಕಾದಂತೆ ಎಡಿಟ್ ಮಾಡಿಕೊಂಡಿರುವ ವಿಡಿಯೊ…ಎಂಜಾಯ್!’ ಎಂದು ರಮ್ಯಾ ವಿಡಿಯೊ ಕುರಿತು ಪ್ರತಿಕ್ರಿಯಿಸಿ ಟ್ವೀಟಿಸಿದ್ದಾರೆ.

Comments are closed.