ಕರಾವಳಿ

ಸಿನಿಮೀಯ ರೀತಿಯಲ್ಲಿ ಮೆಡಿಕಲ್ ಶಾಪ್ ಕಳವು: ಆಗಂತುಕನ ಚಿತ್ರ ಸಿಸಿಟಿವಿಯಲ್ಲಿ ದಾಖಲು (ವೀಡಿಯೊ)

Pinterest LinkedIn Tumblr

ಕುಂದಾಪುರ: ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಸಿನಿಮಾ ಮಾದರಿಯಲ್ಲಿ ಬೆಳ್ಳಂಬೆಳಗ್ಗೆ ಖಾಸಗಿ ಆಸ್ಪತ್ರೆಗೆ ನುಗ್ಗಿ ನಗದು ದೋಚಿ ಪರಿಯಾದ ಘಟನೆ ಕುಂದಾಪುರ ಪಾರಿಜಾತ ಸರ್ಕಲ್ ಬಳಿ ನಡೆದಿದೆ.

ಬೆಳಗ್ಗೆ ಮೆಡಿಕಲ್ ಸ್ಟೋರ್‌ನಲ್ಲಿ ಆಗಮಿಸಿದ ಅಪರಿಚಿತ ವ್ಯಕ್ತ ಏಕಾ‌ಏಕಿ ಮೆಡಿಕಲ್ ಸ್ಟೋರ್ ಒಳನುಗ್ಗಿದ್ದು, ಇದನ್ನು ಕಂಡ ಮೆಡಿಕಲ್ ಸ್ಟೋರಿನಲ್ಲಿದ್ದ ಮಹಿಳೆ ಹೆದರಿ ಮತ್ತೊಂದು ಬದಿಗೆ ಜರಿದು ಹೋಗಿದ್ದಾರೆ. ಬಿಳಿ ಹೆಲ್ಮೆಟ್ ಹಾಗೂ ಕಪ್ಪು ಬಣ್ಣದ ಜರ್ಕಿನ್ ತೊಟ್ಟ ವ್ಯಕ್ತಿ ಕ್ಯಾಶ್ ಬಾಕ್ಸ್ ತೆರೆದು ಅದರಲ್ಲಿದ್ದ ನಗದು ಕೈಚೀಲಕ್ಕೆ ತುಂಬಿಕೊಂಡು ಕೌಂಟರ್ ನೆಗೆದು ಪರಾರಿಯಾಗಿದ್ದಾನೆ. ಈ ದೃಶ್ಯ ಆಸ್ಪತ್ರೆ ಸಿಸಿ ಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.

ಬೆಳಗ್ಗೆ ಪಾರಿಜಾತ್ ಸರ್ಕಲ್ ಬಳಿ ಬೈಕಿನಲ್ಲಿ ಬಂದ ವ್ಯಕ್ತಿ ಕಾರ್ ಸ್ಟ್ಯಾಂಡ್‌ನಲ್ಲಿ ಬೈಕ್ ನಿಲ್ಲಿಸಿ ಗ್ರಾಹಕರಂತೆ ಮೆಡಿಕಲ್ ಸ್ಟೋರಿಗೆ ಬಂದಿದ್ದಾನೆ. ಈ ಸಂದರ್ಭದಲ್ಲಿ ಮೆಡಿಕಲ್ ಆಸ್ಪತ್ರೆ ಗ್ರಾಹಕರ ಜತೆ ವ್ಯವಹರಿಸುತ್ತಿದ್ದರು.  ಮೆಡಿಕಲ್ ಸ್ಟೋರ್ ಒಂದು ಬದಿಯಲ್ಲಿದ್ದ ಬಾಗಿಲು ದೂಡಿಕೊಂಡ ಒಳಬಂದ ವ್ಯಕ್ತಿ ನೇರವಾಗಿ ಕ್ಯಾಷ್ ಬಾಕ್ಸ್ ಹತ್ತಿರಬಂದಿದ್ದು, ಎಲ್ಲವನ್ನೂ ಮೊದಲೇ ಗಮನಿಸಿ ಕಳಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.