ಕರಾವಳಿ

ಇಲಿಗೆ ಇಟ್ಟಿದ್ದ ಗಮ್‌ನಲ್ಲಿ ಸಿಲುಕಿದ ನಾಗರ ಹಾವಿನ ಮರಿ ರಕ್ಷಣೆ (ವಿಡಿಯೋ ವರದಿ)

Pinterest LinkedIn Tumblr

ಉಡುಪಿ: ಇಲಿಗಳ ಕಾಟದಿಂದ ಬೇಸತ್ತಿದ್ದ ಉಡುಪಿ ನಿಟ್ಟೂರಿನ ಅಂಗಡಿ ಮಾಲೀಕರು ಇಲಿಗಳ ಕಾಟ ತಪ್ಪಿಸಲು ಟ್ರೇನಲ್ಲಿ ಗಮ್ ಹಾಕಿ ಅದರ ಮದ್ಯೆ ಆಹಾರವನ್ನು ಇಡುತ್ತಿದ್ದರು. ಈ ರೀತಿಯ ಉಪಾಯದಿಂದ ನಿತ್ಯ ಇಲಿಗಳು ಟ್ರೇನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದವು. ಹೀಗೆ ಒಂದು ದಿನ ನಿಟ್ಟೂರಿನ ಅಂಗಡಿ ಮಾಲಕ ರಘು ಅವರಿಗೆ ಶಾಕ್ ಒಂದು ಕಾದಿತ್ತು. ಟ್ರೇನಲ್ಲಿ ಇಲಿ ಇದೆಯಾ ಎಂದು ನೋಡಿದಾಗ ನಾಗರ ಹಾವಿನ ಮರಿಯೊಂದು ಗಮ್‌ನಲ್ಲಿ ಸಿಕ್ಕಿ ಹಾಕಿಕೊಂಡಿತ್ತು.

ಈ ಬಗ್ಗೆ ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ಅಂಗಡಿಮಾಲಿಕ ರಘು ಮಾಹಿತಿ ನೀಡಿದರು. ಗುರುರಾಜ್ ಸನಿಲ್ ತೆಂಗಿನೆ ಎಣ್ಣೆ ಬಳಸಿ ಹಾವಿನ ಮರಿಯನ್ನು ರಕ್ಷಿಸಿದ್ದಾರೆ.

Comments are closed.