ರಾಷ್ಟ್ರೀಯ

ಗುಜರಾತ್’ನಲ್ಲಿ ಬಿಜೆಪಿಗೆ ಗುಡ್ ಬೈ ಹೇಳಿದ ಪಟೇಲ್ ಸಮುದಾಯದ ನಾಯಕ ನಿಖಿಲ್ ಸವಾನಿ

Pinterest LinkedIn Tumblr

ಅಹಮದಾಬಾದ್: ಮುಂಬರುವ ವಿಧಾನಸಭೆ ಚುನಾವಣೆಗೆ ಗುಜರಾತ್ ರಾಜ್ಯ ಸರ್ಕಾರ ಸಜ್ಜಾಗಿರುವ ಬೆನ್ನಲ್ಲೇ , ಮತ್ತೋರ್ವ ಪಟೇಲ್ ಸಮುದಾಯದ ನಾಯಕ ನಿಖಿಲ್ ಸವಾನಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ನೀಡಿದ ಯಾವ ಭರವಸೆಯನ್ನೂ ಪೂರೈಸದ ಕಾರಣ ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಪಟೇಲ್ ಸಮುದಾಯದ ಇನ್ನೋರ್ವ ನಾಯಕ ನರೇಂದ್ರ ಪಟೇಲ್ ಗೆ ಬಿಜೆಪಿ ಸೇರಲು 1 ಕೊಟಿ ರೂ. ಆಮಿಷ ಒಡ್ಡಲಾಗಿತ್ತು ಎನ್ನುವುದು ಕುರಿತು ಅಸಮಾಧಾನ ವ್ಯಕ್ತಪಡಿಸಿದರು. “ನಾನು ಪಟೇಲ್ ಸಮುದಾಯದ ಸುಧಾರಣೆಗೆ ಬಿಜೆಪಿ ನೀಡಿದ್ದ ಪೊಳ್ಳುಭರವಸೆಗಳಿಂದ ನೊಂದು ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನನ್ನ ಸಮುದಾಯದ ಸುಧಾರಣೆಗಾಗಿಯೇ ನಾನು ಬಿಜೆಪಿಗೆ ಸೇರಿದ್ದೆ. ಆದರೆ ಅವರು ನಮಗೆ ನೀಡಿದ್ದ ನಾಲ್ಕು ಭರವಸೆಗಳನ್ನೂ ಈಡೇರಿಸಲಿಲ್ಲ. ಅವರು ಚುನಾವಣೆ ಸಮಯದಲ್ಲಿ ತಮ್ಮ ಬೆಂಬಲ ಗಳಿಸಲಿಕ್ಕಾಗಿಯೇ ಈ ಭರವಸೆ ನೀಡಿದ್ದರೆಂದು ನಾನು ನಂಬುತ್ತೇನೆ.”

“ಬಿಜೆಪಿಯ ವರುಣ್ ಪಟೇಲ್ ಅವರಿಂದ ನೀಡಿರುವ ಲಂಚವನ್ನು ನಿರಾಕರಿಸಿದ್ದಕ್ಕಾಗಿ ನರೇಂದ್ರ ಪಟೇಲ್ ಅವರನ್ನು ನಾನು ಅಭಿನಂದಿಸುತ್ತೇನೆ. ಅವರು ಮದ್ಯಮ ವರ್ಗದ ಕುಟುಂಬದಿಂದ ಬಂದರೂ ಅವರು ಹಣ ಪಡೆಯಲು ನಿರಾಕರಿಸಿದ್ದಾರೆ. ಪಕ್ಷಕ್ಕೆ ಸೇರುವ ಸಂದರ್ಭದಲ್ಲಿ ನಾನು ಯಾವುದೇ ಹಣವನ್ನು ನಿರೀಕ್ಷಿಸಿರಲಿಲ್ಲ,”

ನೀವು ಕಾಂಗ್ರೆಸ್ ಗೆ ಬೆಂಬಲ ನೀಡುವಿರಾ ಎಂದು ಕೇಳಿದಾಗ ನಮ್ಮ ಸಮುದಾಯದ ಅಭಿವೃದ್ಧಿಯಷ್ಟೇ ನನಗೆ ಮುಖ್ಯ ಎಂದು ಸವಾನಿ ಪುನರುಚ್ಚರಿಸಿದರು.

“ನಾನು ಮತ್ತು ಹಾರ್ಡಿಕ್ ಪಟೇಲ್, ರಾಹುಲ್ ಗಾಂಧಿ ಸಮಯ ನಿಡಿದರೆ ಅವರ ಮುಂದೆ ನಮ್ಮ ದೃಷ್ಟಿಕೋನದ ಕುರಿತು ಹಂಚಿಕೊಳ್ಳಲಿದ್ದೇವೆ. ಎಲ್ಲಕ್ಕೂ ಅಂತಿಮವಾಗಿ ಪಟೇಲ್ ಸಮುದಾಯವನ್ನು ಅಧಿಕಾರಕ್ಕೆ ತಲು ನಾವು ಬಯಸುತ್ತೇವೆ.ಬಿಜೆಪಿ ಬಹಳಷ್ಟು ಭರವಸೆ ನೀಡಿತ್ತು, ಆದರೆ ಏನನ್ನೂ ಕಾರ್ಯಗತಗೊಳಿಸಲಿಲ್ಲ. ನಾನು ರಾಜೀನಾಮೆ ನಿಡಿದ್ದರಿಂದ ಕಾಂಗ್ರೆಸ್ ಗೆ ಏನೂ ಲಾಭವಾಗುವುದಾಗಿ ಭಾವಿಸಬೇಕಿಲ್ಲ” ಅವರು ಹೇಳಿದರು.

Comments are closed.