ಪ್ರಮುಖ ವರದಿಗಳು

ನಾಯಿಯೊಂದು ಮೃತ ಶಿಶು ದೇಹವನ್ನು ಹೊತ್ಯೊಯ್ಯುತ್ತಿರುವ ವಿಡಿಯೋ ವೈರಲ್

Pinterest LinkedIn Tumblr

https://youtu.be/_6wt7WcRDWg

ಮುಜಾಫರ್‌ಪುರ್‌: ನಾಯಿಯೊಂದು ಮೃತ ಶಿಶು ದೇಹವನ್ನು ಹೊತ್ಯೊಯ್ಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಿಹಾರದ ಮುಜಾಫರ್ಪುರದ ಪ್ರಮುಖ ಸರ್ಕಾರಿ ಆಸ್ಪತ್ರೆಯಾಗಿರುವ ಎಸ್ಕೆಎಂಸಿಹೆಚ್ ನಲ್ಲಿ ನವಜಾತ ಶಿಶುವಿನ ಮೃತದೇಹ ನಾಯಿ ಪಾಲಾಗಿದೆ. ಶಿಶುವಿನ ಮೃತದೇಹವನ್ನು ಬಾಯಿಯಲ್ಲಿ ಕಚ್ಚಿಕೊಂಡು ನಾಯಿಯೊಂದು ಓಡುತ್ತಿದ್ದು ಈ ದೃಶ್ಯಗಳನ್ನು ವ್ಯಕ್ತಿಯೊಬ್ಬರು ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಹೆರಿಗೆಗಾಗಿ ಎಸ್ಕೆಎಂಸಿಹೆಚ್ ಜಿಲ್ಲಾಸ್ಪತ್ರೆಗೆ ಬಂದಿದ್ದ ಮಹಿಳೆಯೊಬ್ಬರು ಶಿಶುವಿಗೆ ಜನ್ಮ ನೀಡಿದ್ದಾರೆ. ಬಳಿಕ ಮಗು ಮೃತಪಟ್ಟಿದ್ದು ತಾಯಿ ಮತ್ತು ಅವರ ಕುಟುಂಬಸ್ಥರು ಶಿಶುವನ್ನು ಆಸ್ಪತ್ರೆಯಲ್ಲೇ ಬಿಟ್ಟು ತೆರಳಿದ್ದಾರೆ. ಈ ಶಿಶುವನ್ನು ಆಸ್ಪತ್ರೆಯ ಸಿಬ್ಬಂದಿ ತಿಪ್ಪಿಗೆ ಎಸೆದಿದ್ದಾರೆ.

Comments are closed.