ಪ್ರಮುಖ ವರದಿಗಳು

ಚಿಕಾಗೋದಲ್ಲಿ ಅಮೆರಿಕನ್ ಏರ್ಲೈನ್ಸ್ ವಿಮಾನದಲ್ಲಿ ಬೆಂಕಿ; ಜೀವ ರಕ್ಷಿಸಿಕೊಂಡ 170 ಮಂದಿ ಪ್ರಯಾಣಿಕರು…ಇಲ್ಲಿದೆ ವೀಡಿಯೊ

Pinterest LinkedIn Tumblr

ಚಿಕಾಗೋ: ಅಮೇರಿಕಾದ ಚಿಕಾಗೊದಲ್ಲಿ ಅಮೆರಿಕನ್ ಏರ್ಲೈನ್ಸ್ ವಿಮಾನದಲ್ಲಿ ಬೆಂಕಿ ಹತ್ತಿಕೊಂಡ ಪರಿಣಾಮ 20 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಚಿಕಾಗೋವಿನ ಓಹಾರೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ವಿಮಾನದ ಎಂಜಿನ್’ನಲ್ಲಿ ಕಾಣಿಸಿಕೊಂಡ ಬೆಂಕಿ ಬಳಿಕ ಎಲ್ಲ ಕಡೆ ಹರಡಿತು. ವಿಮಾನದಲ್ಲಿ ಒಟ್ಟು 9 ಮಂದಿ ವಿಮಾನ ಸಿಬ್ಬಂದಿಗಳು ಸೇರಿದಂತೆ 170 ಜನರಿದ್ದರು. ಈ ವೇಳೆ ಕೆಲವರು ವಿಮಾನದ ಮೆಟ್ಟಿಲಿನಿಂದಲೇ ಕೆಳಗೆ ಹಾರಿ ತಮ್ಮ ಜೀವವನ್ನು ಉಳಿಸಿಕೊಂಡಿದ್ದಾರೆ. ಗಾಯಗೊಂಡಿರುವ 20 ಮಂದಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

Comments are closed.