ರಾಷ್ಟ್ರೀಯ

ಮುಂದಿನ ವರ್ಷ ವಿಶ್ವ ದಾಖಲೆಗೆ ಮಾಡಲು ಮುಂದಾಗಿದೆ ಇಸ್ರೋ; ಒಂದೇ ರಾಕೆಟ್ ನಲ್ಲಿ 83 ಉಪಗ್ರಹ ಕಕ್ಷೆಗೆ ಸೇರಿಸಲು ಸಿದ್ಧತೆ

Pinterest LinkedIn Tumblr

isro

ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವು ಮಹತ್ವದ ಮೈಲುಗಲ್ಲುಗಳನ್ನು ಸ್ಥಾಪಿಸಿರುವ ಇಸ್ರೋ ಇದೀಗ ಮತ್ತೊಂದು ವಿಶ್ವ ದಾಖಲೆಗೆ ಸಿದ್ಧವಾಗಿದೆ. 2017 ರಲ್ಲಿ ಒಂದೇ ರಾಕೆಟ್‌ ಮೂಲಕ ಒಟ್ಟಿಗೆ 83 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಸಿದ್ಧತೆ ನಡೆಸಿದೆ.

ಭಾರತದ 2 ಹಾಗೂ ವಿದೇಶದ 81 ಉಪಗ್ರಹಗಳನ್ನು ಒಂದೇ ರಾಕೆಟ್‌ ಮೂಲಕ ಕಕ್ಷೆಗೆ ಸೇರಿಸುವ ಐತಿಹಾಸಿಕ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದು, 2017ರ ಆರಂಭದಲ್ಲಿ ಪೂರ್ಣಗೊಳಿಸಲಿದೆ ಎಂದು ಆಂತ್ರಿಕ್ಸ್ ಕಾರ್ಪೋರೇಷನ್ ಮೂಲಗಳು ತಿಳಿಸಿವೆ.

2017ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಸಿಂಗಲ್ ರಾಕೆಟ್ ಮೂಲಕ 83 ಉಪಗ್ರಹ ಉಡಾವಣೆಗೆ ಯೋಜನೆ ಹಾಕಿಕೊಳ್ಳಲಾಗಿದೆ. ವಿದೇಶದ ನ್ಯಾನೋ ಸೆಟ್‌ಲೈಟ್‌ಗಳನ್ನೂ ಕೂಡ ಉಡಾವಣೆ ಮಾಡಲಾಗುವುದು ಎಂದು ಆಂತ್ರಿಕ್ಸ್ ಕಾರ್ಪೋರೇಷನ್‌ ಸಂಸ್ಥೆಯ ಚೇರಮನ್‌ ರಾಕೇಶ್ ಶಶಿಭೂಷಣ್ ತಿಳಿಸಿದ್ದಾರೆ.

Comments are closed.