ವೀಡಿಯೋ ವರದಿಗಳು

ಪಾಕ್ ನ್ಯೂಸ್ ಚಾನಲ್‌’ನ ಮಹಿಳಾ ವರದಿಗಾರ್ತಿಗೆ ಸಾರ್ವಜನಿಕ ಸ್ಥಳದಲ್ಲೇ ಕಪಾಳ ಮೋಕ್ಷ ಮಾಡಿದ ಪೊಲೀಸ್ ಪೇದೆ ! ವೀಡಿಯೊ ವೈರಲ್

Pinterest LinkedIn Tumblr

https://youtu.be/ZWfAYdD9zpY

ಇಸ್ಲಮಾಬಾದ್: ನ್ಯೂಸ್ ಚಾನಲ್‌’ನ ಮಹಿಳಾ ರಿಪೋರ್ಟರ್‌ವೊಬ್ಬರಿಗೆ ಪೊಲೀಸನೋರ್ವ ಸಾರ್ವಜನಿಕ ಸ್ಥಳದಲ್ಲೇ ಕಪಾಳ ಮೋಕ್ಷ ಮಾಡಿರುವ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ. ಕೆ-21 ನ್ಯೂಸ್‌ ಚಾನಲ್‌’ನ ಸೈಮಾ ಕನ್ವಾಲ್‌ ಎಂಬಾಕೆಯೇ ಪೊಲೀಸ್‌’ನಿಂದ ಹೊಡೆಸಿಕೊಂಡ ರಿಪೋರ್ಟರ್‌.

ಸೈಮಾ ಕರಾಚಿಯ ನದ್ರಾ ನೋಂದಣಿ ಕಚೇರಿಯ ಸಿಬ್ಬಂದಿಯಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವರದಿ ಮಾಡಲು ತೆರಳಿದ್ದರು. ಈ ವೇಳೆ ಓರ್ವ ಪೇದೆಯನ್ನು ಮಾತನಾಡಿಸಲು ಯತ್ನಿಸಿದಾಗ ಆತ ಕುಪಿತಗೊಂಡಿದ್ದಾನೆ. ಮೊದಲು ರಿಪೋರ್ಟ್‌ ಮಾಡುವುದನ್ನು ನಿಲ್ಲಿಸಲು ಪೊಲೀಸ್‌ ಹೇಳಿದ್ದಾನೆ. ಬಳಿಕ ಕ್ಯಾಮರಾಮನ್‌ ಶೂಟ್ ಮಾಡುವುದನ್ನು ತಡೆಯಲು ಯತ್ನಿಸಿದ್ದಾನೆ. ಈ ವೇಳೆ ವರದಿಗಾರ್ತಿ ಸೈಮಾ ಮಾಧ್ಯಮದ ಮೇಲೆ ಹಲ್ಲೆ ನಡೆಯುವುದನ್ನು ರೆಕಾರ್ಡ್‌ ಮಾಡುವಂತೆ ಕ್ಯಾಮರಾಮೆನ್‌’ಗೆ ತಿಳಿಸಿದ್ದಾರೆ. ಇದರಿಂದ ಮತ್ತಷ್ಟು ಕುಪಿತಗೊಂಡ ಪೇದೆ ಎಲ್ಲರ ಎದುರು ಆಕೆಯ ಕೆನ್ನೆಗೆ ಬಾರಿಸಿದ್ದಾನೆ.

ಈ ವಿಡಿಯೋ ವೈರಲ್‌ ಆಗಿದ್ದು, ವರದಿಗಾರ್ತಿ ಮೇಲೆ ಹಲ್ಲೆ ಮಾಡಿರುವ ಕುರಿತು ಗುಲ್‌ಬಾಹರ್‌ ಪೊಲೀಸರು ಪೇದೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಮ್ಮ ಕಚೇರಿ ಕೆಲಸಕ್ಕೆ ಅಡ್ಡಿಪಡಿಸಿದರೆಂಬ ಕಾರಣಕ್ಕೆ ನೋಂದಣಿ ಕಚೇರಿ ಟಿವಿ ಚಾನೆಲ್‌ ರಿಪೋರ್ಟರ್‌, ಕ್ಯಾಮೆರಾಮನ್ ವಿರುದ್ಧ ದೂರು ದಾಖಲಿಸಿದೆ.

Comments are closed.