
ನವದೆಹಲಿ: ವರದಕ್ಷಿಣಿ ಕಿರುಕುಳ ನೀಡಿ ಪತ್ನಿಯ ಸಾವಿಗೆ ಕಾರಣವಾಗಿರುವ ಆರೋಪ ಎದುರಿಸುತ್ತಿರುವ ರಾಷ್ಟ್ರೀಯ ಕಬ್ಬಡ್ಡಿ ಆಟಗಾರ ರೋಹಿತ್ ಚಿಲ್ಲಾರ್ನನ್ನು ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ. ರೋಹಿತ್ ತಂದೆ ವಿಜಯ್ ಸಿಂಗ್ ಪೊಲೀಸರಿಗೆ ಶರಣಾಗಿದ್ದಾರೆ.
ರೋಹಿತ್ ಚಿಲ್ಲಾರ್ ಪತ್ನಿ ಲಲಿತಾ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಯುವ ಮುನ್ನ ಲಲಿತಾ 27 ನಿಮಿಷಗಳ ವಿಡಿಯೋ ರೆಕಾರ್ಡಿಂಗ್ ಮಾಡಿ ರೋಹಿತ್ ಮನೆಯಲ್ಲಿ ತನಗೆ ಮಾನಸಿಕ ಹಿಂಸೆ ನೀಡುತ್ತಿರುವ ಕುರಿತು ವಿವರಿಸಿದ್ದರು.
ರೋಹಿತ್ ಚಿಲ್ಲಾರನನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿಸಲಾಗಿದ್ದು, ಮುಂಬೈ ಕೋರ್ಟ್ನಲ್ಲಿ ಹಾಜರು ಪಡಿಸಿ ನಂತರ ದೆಹಲಿಗೆ ಕರೆತರಲಾಗುವುದು. ದೆಹಲಿಯಲ್ಲಿ ಶರಣಾಗಿರುವ ರೋಹಿತ್ ತಂದೆ ವಿಜಯ್ ಅವರನ್ನು ಕೋರ್ಟಿನಲ್ಲಿ ಹಾಜರು ಪಡಿಸಲಾಗುವುದು.
ರೋಹಿತ್ ಚಿಲ್ಲಾರ್ ರಾಷ್ಟ್ರೀಯ ಕಬಡ್ಡಿ ಆಟಗಾರರಾಗಿದ್ದು, ಪ್ರೋ ಕಬಡ್ಡಿ ಲೀಗ್ನಲ್ಲಿ ಬೆಂಗಳೂರು ಬುಲ್ಸ್ ತಂಡದ ಪರ ಆಡುತ್ತಿದ್ದಾರೆ.
ಲಲಿತಾ ರೋಹಿತ್ ಚಿಲ್ಲಾರ್ ಅವರನ್ನು ಎರಡನೇ ಮದುವೆಯಾಗಿದ್ದರು. ಮೊದಲನೆಯ ಗಂಡನೂ ಸಹ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಕಾರಣ ಆತನನ್ನು ತೊರೆದು ರೋಹಿತ್ರನ್ನು ಮದುವೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.