ಕರಾವಳಿ

ನಗರದಲ್ಲಿ ಕಾರ್ಯಾಚರಿಸುತ್ತಿರುವ ಜುಗಾರಿ ಕ್ಲಬ್ ಹಾಗೂ ಸ್ಕಿಲ್ ಗೇಮ್‌ಗಳ ನಿಯಂತ್ರಣಕ್ಕೆ ಡಿ.ವೈ.ಎಫ್.ಐ ಆಗ್ರಹ

Pinterest LinkedIn Tumblr

dyfi_protest-jugari_1

ಮಂಗಳೂರು : ನಗರದ ಕೂಳೂರು ಪರಿಸರದಲ್ಲಿ ಕಾರ್ಯಾಚರಿಸುತ್ತಿರುವ ಸ್ಕಿಲ್ ಗೇಮ್ ಅಕ್ರಮ ಜೂಜು ಕೇಂದ್ರಗಳನ್ನು ಮುಚ್ಚಲು ಒತ್ತಾಯಿಸಿ dyfi ಪಂಜಿಮೊಗರು ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ dyfi ಜಿಲ್ಲಾ ಉಪಾದ್ಯಕ್ಷರಾದ ಬಿ.ಕೆ ಇಮ್ತಿಯಾಝ್ ಮತನಾಡಿ, ರಿಕ್ರಿಯೇಶನ್ ಕ್ಲಬ್ ಹಾಗೂ ಸ್ಕಿಲ್ ಗೇಮ್ ಎಂಬ ಹೆಸರಿನಲ್ಲಿ ಜೂಜಾಟ ನಡೆಸಲಾಗುತ್ತಿದೆ ಈ ಬಗ್ಗೆ ಪೂಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

dyfi ಜಿಲ್ಲಾದ್ಯಕ್ಷರಾದ ದಯಾನಂದ ಶೆಟ್ಟಿ ಮಾತನಾಡಿ, ಕೂಳೂರು ಪ್ರದೇಶವು ಇತ್ತೀಚಿಗೆ ಅನೇಕ ಕುಕೃತ್ಯಗಳಿಗೆ ಒಳಗಾಗುತ್ತಿದೆ ಇದರ ಹಿಂದೆ ಸ್ಕಿಲ್ ಗೇಮ್ , ಜೂಜು ಅಡ್ಡೆಗಳು ಕಾರಣವಾಗುತ್ತಿದೆ ಸ್ಕಿಲ್‌ಗೇಮ್ ಗೆ ಬಲಿಯಾಗಿ ಅನೇಕ ಕುಟುಂಬಗಳು ಬೀದಿಪಾಲಾಗುತ್ತಿದೆ. ಸ್ಕಿಲ್ ಗೇಮ್ ಹೆಸರಿನಲ್ಲಿ ಜೂಜು ಕೇಂದ್ರಗಳಿಗೆ ಅನುಮತಿ ನೀಡುವ ಕುರಿತು ಮ.ನಾ.ಪ ಪುನರ್ ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದರು.

dyfi_protest-jugari_2 dyfi_protest-jugari_3 dyfi_protest-jugari_4 dyfi_protest-jugari_5 dyfi_protest-jugari_6

dyfi ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಜಿಲ್ಲೆಯಲ್ಲಿ ಹೊಸ ಮದರಿಯ ಜೂಜು ಕೇಂದ್ರಗಳು ತಲೆ ಎತ್ತುತ್ತಿವೆ. ಇವುಗಳು ಅನೇಕ ಸಮಾಜ ಘಾತುಕ ಕೃತ್ಯಗಳಿಗೆ ಕಾರಣವಾಗುತ್ತಿದೆ, ಈ ಬಗ್ಗೆ ಪೋಲೀಸ್ ಆಯುಕ್ತರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂಧರ್ಭ ನಗರದಾದ್ಯಂತ ನಾಯಿಕೊಡೆಗಳಂತೆ ಕಾರ್ಯಾಚರಿಸುತ್ತಿರುವ ಜುಗಾರಿ ಅಡ್ಡೆಗಳು ಹಾಗೂ ಸ್ಕಿಲ್ ಗೇಮ್ ಅಡ್ಡೆಗಳನ್ನು ನಿಯಂತ್ರಿಸಿ ಕೂಳೂರು ವ್ಯಾಪ್ತಿಯಲ್ಲಿ ಅವ್ಯಾಹುತವಾಗಿ ನಡೆಯುತ್ತಿರುವ ಜೂಜು ಅಡ್ಡೆಗಳನ್ನು ಮುಚ್ಚಲು ಕ್ರಮಕ್ಕೆ ಆಗ್ರಹಿಸಿ ಮನವಿಯೊಂದನ್ನು ಸಹಾಯಕ ಪೂಲೀಸ್ ಆಯುಕ್ತರಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಡಿವೈ.ಎಫ್.ಐ ಮುಖಂಡರಾದ ಶ್ರೀಮತಿ ಆಶಾ, ಪ್ರಮೀಳ, ಸಾದಿಕ್, ಉಸ್ಮಾನ್, ಅಶೋಕ್ ಶ್ರೀಯಾನ್, ಪ್ರತಿಭಟನೆಯ ನೇತೃತ್ವವನ್ನು ಡಿ.ವೈ.ಎಫ್.ಐ ಪಂಜಿಮೊಗರು ಘಟಕದ ಅದ್ಯಕ್ಷರಾದ ನೌಶಾದ್, ಕಾರ್‍ಯದರ್ಶಿ ಸಂತೋಷ್ ಡಿಸೋಜ ಹಾಗೂ ಪದಾಧಿಕಾರಿಗಳಾದ ಅನಿಲ್ ಡಿಸೂಜ, ಇಬ್ರಾಹಿಂ ಖಲೀಲ್ , ಸಂತೋಷ್, ಚರಣ್, ನಿಯಾಝ್, ಬಶೀರ್,ಹನುಮಂತ, ರಿಯಾಜ್, ಮತ್ತಿತ್ತರರು ವಹಿಸಿದ್ದರು.

Comments are closed.