ರಾಷ್ಟ್ರೀಯ

ಯೋಗೇಶ್ ಅಗರ್‌ವಾಲ್ ಎಂಬವರಿಂದ 2300 ಕೋ. ರೂ. ಕಪ್ಪುಹಣ ವಶ

Pinterest LinkedIn Tumblr

black-money-generic_650x400_81435806469

ನವದೆಹಲಿ: ರಿಮ್‌ಝಿಮ್ ಇಸ್ಪಾಟ್ ಗ್ರೂಪ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ (ಎಂಡಿ) ಯೋಗೇಶ್ ಅಗರ್‌ವಾಲ್ ಎಂಬುವವರನ್ನು ಬಂಧಿಸಿರುವ ಕೇಂದ್ರ ಅಬ್ಕಾರಿ ಜಾಗೃತ ದಳದ ಮಹಾ ನಿರ್ದೇಶನಾಲಯ (ಡಿಜಿಸಿಇಐ) ಅವರ ರಹಸ್ಯ ಕಚೇರಿಯಲ್ಲಿ 2300 ಕೋಟಿ ರೂ. ಕಪ್ಪುಹಣವನ್ನು ಪತ್ತೆಹಚ್ಚಿದ್ದಾರೆ.

ಏಜನ್ಸಿಯ ಪ್ರಕಾರ ಸಂಸ್ಥೆಯ ವಾರ್ಷಿಕ ವ್ಯವಹಾರ 2000 ಕೋಟಿಗಳು. ಇದನ್ನು ತೆರಿಗೆ ಅಧಿಕಾರಿಗಳೇ ಬಹಿರಂಗಪಡಿಸಿದ್ದರು.

ಸುಳಿವೊಂದನ್ನು ಆಧರಿಸಿ ತನಿಖೆ ಆರಂಭಿಸಿದ ಡಿಜಿಸಿಇಐ ಅಧಿಕಾರಿಗಳು ಉತ್ತರ ಪ್ರದೇಶದ ಕಾನ್ಪುರ್‌ನ ಹರ್ಷನಗರ್ ಎಂಬಲ್ಲಿ ಮತ್ತೊಂದು ರಹಸ್ಯ ಕಚೇರಿ ಹೊಂದಿದ್ದಾರೆ ಎಂಬುದನ್ನು ಪತ್ತೆ ಹಚ್ಚಿದರು.

ನಂತರ ಕಚೇರಿಗೆ ದಿಗ್ಭಂದನ ವಿಧಿಸಿ ಕಂಪ್ಯೂಟರ್ ಹಾರ್ಡ್ ಡಿಸ್ಕ್ ವಶಪಡಿಸಿಕೊಂಡು ಅಂಕಿಅಂಶಗಳನ್ನು ಪರಿಶೀಲಿಸಿದಾಗ ಕಳೆದ 5 ವರ್ಷಗಳಲ್ಲಿ 2300 ಕೋಟಿ ರೂ. ಗಳ ಲೆಕ್ಕ ತೋರಿಸದ ಹಣ ಪತ್ತೆಯಾಗಿದೆ.

ತನಿಖೆ ಇನ್ನೂ ಮುಂದುವರೆದಿರುವುದರಿಂದ ಕಪ್ಪುಹಣದ ಮೊತ್ತ ಇನ್ನಷ್ಟು ಏರಿಕೆಯಾಗುವ ಸಂಭವವಿದೆ ಎಂದೂ ಡಿಜಿಸಿಇಐ ಮೂಲಗಳು ತಿಳಿಸಿವೆ. ರಿಂಝಿಮ್ ಇಸ್ಪಾಟ್ ಗ್ರೂಪ್ ಸಂಸ್ಥೆ ಕಬ್ಬಿಣ ಮತ್ತು ಉಕ್ಕಿಗೆ ಸಂಬಂಧಿಸಿದ ಹಲವಾರು ವಸ್ತುಗಳನ್ನು ತಯಾರಿಸುವ ಮುಂಚೂಣಿ ಸಂಸ್ಥೆಯಾಗಿದೆ.

ಯೋಗೇಶ್ ಅಗರ್‌ವಾಲ್‌ರನ್ನು ಕಳೆದ ಬುಧವಾರ ಪ್ರಶ್ನಿಸಿದ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.

Comments are closed.