ವೀಡಿಯೋ ವರದಿಗಳು

ಮಾಜಿ ಸಚಿವ ಜನಾರ್ಧನ ರೆಡ್ಡಿ ಪುತ್ರಿಯ ವಿವಾಹದ ವಿಶಿಷ್ಟ ರೀತಿಯ ಆಹ್ವಾನ ಪತ್ರಿಕೆ ಒಮ್ಮೆ ನೋಡಿ….

Pinterest LinkedIn Tumblr

https://youtu.be/rHRQEPxAu74

ಬೆಂಗಳೂರು: ಮಾಜಿ ಸಚಿವ ಹಾಗೂ ಗಣಿ ಧಣಿ ಜನಾರ್ದನರೆಡ್ಡಿ ಪುತ್ರಿ ಬ್ರಹ್ಮಿಣಿಯ ಮದುವೆಗೆ ಭರದ ಸಿದ್ಧತೆ ನಡೆದಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಹೈದರಾಬಾದ್‌ ಮೂಲದ ಉದ್ಯಮಿಯ ಪುತ್ರ ರಾಜೀವ್‌ ರೆಡ್ಡಿ ಅವರೊಂದಿಗೆ ನವೆಂಬರ್‌ 16ರಂದು ನಡೆಯಲಿದೆ. ಈ ಮದುವೆಗೆ ರೆಡ್ಡಿ ಕುಟುಂಬ ವಿಶಿಷ್ಟ ರೀತಿಯ ಆಹ್ವಾನ ಪತ್ರಿಕೆಯನ್ನು ಸಿದ್ಧಪಡಿಸಿದೆ.

2

ಎಲ್‌ಇಡಿ ಪರದೆ ಮೇಲೆ ರೆಡ್ಡಿ ದಂಪತಿ ಹಾಡಿನ ಮೂಲಕ ಆಹ್ವಾನ ನೀಡುವ ಆಮಂತ್ರಣ ಪತ್ರಿಕೆ ಸಿದ್ಧಪಡಿಸಲಾಗಿದೆ.

ಬಾದಾಮಿ, ಗೋಡಂಬಿ ಮುಂತಾದ ಒಣ ಹಣ್ಣುಗಳು ತುಂಬಿರುವ ಈ ವಿಶೇಷ ಆಮಂತ್ರಣ ಪತ್ರಿಕೆಯು ಶೀಘ್ರದಲ್ಲೇ ರಾಜ್ಯದ ಎಲ್ಲಾ ಜಿಲ್ಲೆಗಳ ಹಿತೈಷಿಗಳಿಗೆ, ಮುಖಂಡರಿಗೆ ತಲುಪಲಿದೆ.

ಹಿಂದೆ ಯಾರು ಮಾಡಿರದಂತ ಮದುವೆ ಸಮಾರಂಭ ಮಾಡಲು ನಿರ್ಧರಿಸಿರುವ ರೆಡ್ಡಿ ಆಮಂತ್ರಣ ಪತ್ರಿಕೆಯಲ್ಲಿ ಹಾಡಿನ ಮೂಲಕ ಆಹ್ವಾನ ನೀಡಿದ್ದಾರೆ. ಆಮಂತ್ರಣ ಪತ್ರಿಕೆ ತೆರೆದರೆ ಮಿನಿ ಎಲ್ ಸಿಡಿ ಪರದೆಯ ಮೇಲೆ ರೆಡ್ಡಿ ಕುಟುಂಬದ ಆಹ್ವಾನದ ಹಾಡು ಆಟೋ ಪ್ಲೇ ಆಗುತ್ತದೆ. ರೆಡ್ಡಿ ದಂಪತಿ, ಪುತ್ರ ಪುತ್ರಿ ಹಾಗೂ ಅಳಿಯ ಈ ಆಹ್ವಾನ ಪತ್ರಿಕೆಯ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

Comments are closed.