ಕ್ರೀಡೆ

ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೊ ಕಬಡ್ಡಿ ಆಟಗಾರ ರೋಹಿತ್‌ಕುಮಾರ್‌ ಪತ್ನಿ

Pinterest LinkedIn Tumblr

ro

ನವದೆಹಲಿ: ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್‌ತಂಡದಲ್ಲಿ ಆಡುವ ರೋಹಿತ್‌ಕುಮಾರ್‌ಅವರ ಪತ್ನಿ ಲಲಿತಾ (27) ಸೋಮವಾರ ಸಂಜೆ ಪಶ್ಚಿಮ ದೆಹಲಿಯಲ್ಲಿರುವ ತಮ್ಮ ಪೋಷಕರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೋಹಿತ್‌ ಅವರು ವಿವಾಹಕ್ಕೂ ಮುನ್ನ ಪರ ಸ್ತ್ರಿಯೊಂದಿಗೆ ಸಂಬಂಧ ಹೊಂದಿದ್ದರು. ಈ ಬಗ್ಗೆ ಪ್ರಶ್ನಿಸಿದಾಗಲೆಲ್ಲಾ ಹಲ್ಲೆ ನಡೆಸುತ್ತಿದ್ದರು. ಜೊತೆಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಅವರು ಡೆತ್‌ನೋಟ್‌ಬರೆದಿಟ್ಟಿ ದ್ದಾರೆ. ಇದರ ಆಧಾರದಲ್ಲಿ ಪೊಲೀಸರು ರೋಹಿತ್‌ಮತ್ತು ಅವರ ಪೋಷಕರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.

ರೋಹಿತ್‌ಮತ್ತು ಲಲಿತಾ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. 2012 ರಲ್ಲಿ ಮೊದಲ ಗಂಡನಿಗೆ ವಿಚ್ಛೇದನಾ ನೀಡಿದ್ದ ಲಲಿತಾ ತಮ್ಮ ಪೋಷಕರ ಒಪ್ಪಿಗೆ ಪಡೆದು ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ರೋಹಿತ್‌ಅವರನ್ನು ಮದುವೆಯಾಗಿದ್ದರು.

‘ಗಂಡನ ಕಿರುಕುಳ ತಾಳಲಾರದೆ ಲಲಿತಾ ಸೆಪ್ಟೆಂಬರ್‌24 ರಂದು ತವರಿಗೆ ಬಂದು ನೆಲೆಸಿದ್ದಳು. ಸೋಮವಾರ ನಾವೆಲ್ಲಾ ಹೊರಗೆ ಹೋಗಿದ್ದ ಸಮಯ ದಲ್ಲಿ ಫ್ಯಾನಿಗೆ ನೇಣು ಬಿಗಿದು ಕೊಂಡಿದ್ದಾಳೆ’ ಎಂದು ಲಲಿತಾ ಅವರ ತಂದೆ ಕರಣ್‌ಸಿಂಗ್‌ತಿಳಿಸಿದ್ದಾರೆ.

ರೋಹಿತ್‌ಅವರು ಹೋದ ವರ್ಷ ದಕ್ಷಿಣ ಏಷ್ಯನ್‌ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಭಾರತ ತಂಡದಲ್ಲಿದ್ದರು. ಮೂರನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಅವರು ಪಟ್ನಾ ಪೈರೇಟ್ಸ್‌ತಂಡದಲ್ಲಿ ಆಡಿದ್ದರು.

Comments are closed.