ವೀಡಿಯೋ ವರದಿಗಳು

ಬಸ್ ಡಿಕ್ಕಿಯಾಗಿ ಆನೆ ಸಾವು….ಈ ವಿಡಿಯೋ ನೋಡಿ

Pinterest LinkedIn Tumblr

https://youtu.be/enzXFi9ts2c

ಬ್ಯಾಂಕಾಕ್: ವೇಗವಾಗಿ ಬರುತ್ತಿದ್ದ ಬಸ್‍ವೊಂದು ಆನೆಗೆ ಡಿಕ್ಕಿ ಹೊಡೆದು ಮುಂದೆ ಹೋಗುವ ಭೀಕರ ಅಪಘಾತದ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಥೈಲ್ಯಾಂಡಿನ ಲಾಂಪಂಗ್ ಚಿಯಾಂಗ್ ಮೈ ರೋಡ್‍ನಲ್ಲಿ ಈ ಅಪಘಾತ ಸಂಭವಿಸಿದೆ.

ಫ್ಲಾಯ್ ಉಡೋಮ್ ಎಂಬ ಹೆಸರಿನ ಆನೆಗೆ ಬಸ್ ಟಿಕ್ಕಿ ಹೊಡೆದ ಪರಿಣಾಮ ಆನೆ ಸಾವನ್ನಪ್ಪಿದೆ. ಥೈಲ್ಯಾಂಡ್ ಆನೆ ಸಂರಕ್ಷಣಾ ಕೇಂದ್ರಕ್ಕೆ ಸೇರಿದ ಆನೆ ಇದಾಗಿದ್ದು, ಆನೆಗಳ ರಕ್ಷಣೆಗೆಂದು ಬ್ಯಾರಿಯರ್ ಹಾಕಿದ್ದ ರಸ್ತೆಯಲ್ಲಿ ನಡೆದಾಡುತ್ತಿತ್ತು. ಬಸ್ ಕಂಡಾಕ್ಷಣ ಕಾಡಿನೊಳಗೆ ಹೋಗಲು ಆನೆ ಎಡಕ್ಕೆ ತಿರುಗಿತ್ತು. ಆದ್ರೆ ಅತ್ಯಂತ ವೇಗವಾಗಿ ಬಸ್ ಚಾಲನೆ ಮಾಡುತ್ತಿದ್ದ ಡ್ರೈವರ್ ಆನೆಗೆ ಡಿಕ್ಕಿ ಹೊಡೆದು ಅದರ ದೇಹದ ಸಮೇತ ಸುಮಾರು 90 ಅಡಿ ದೂರದಷ್ಟು ಮುಂದಕ್ಕೆ ಹೋಗಿದ್ದ.

ಈ ವೇಳೆ ಬಸ್ ಗಂಟೆಗೆ 96 ಕಿಮೀ ವೇಗದಲ್ಲಿ ಹೋಗುತ್ತಿತ್ತು ಅಂತ ವರದಿಯಾಗಿದೆ. ಅಪಘಾತ ದೃಶ್ಯಾವಳಿ ಕಾರ್‍ನಲ್ಲಿ ಕುಳಿತು ಆನೆಯನ್ನು ವಿಡಿಯೋ ಮಾಡುತ್ತಿದ್ದ ಪ್ರತ್ಯಕ್ಷದರ್ಶಿಯೊಬ್ಬರ ಮೊಬೈಲ್‍ನಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಆನೆ ಬಸ್‍ಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಬಸ್‍ನ ಮುಂಬದಿಯ ವಿಂಡ್‍ಸ್ಕ್ರೀನ್ ಪುಡಿಪುಡಿಯಾಗಿ ಚಾಲಕನಿಗೂ ಗಂಭೀರವಾಗಿ ಗಾಯವಾಗಿರೋದನ್ನ ವಿಡಿಯೋದಲ್ಲಿ ನೋಡಬಹುದು.

ಚಾಲಕನನ್ನು 45 ವರ್ಷದ ನರಿಟ್ ಚಿಟ್ಟಾಂಗ್ ಅಂತ ಗುರುತಿಸಲಾಗಿದೆ. ಅಪಘತವಾದ ಸಂದರ್ಭದಲ್ಲಿ ಚಾಲಕ ವೇಗವಾಗಿ ಬಸ್ ಓಡಿಸುತ್ತಿದ್ದುದಲ್ಲದೆ ಓವರ್ ಟೇಕ್ ಮಾಡಿದ್ದ. ನಂತರ ಆನೆಗೆ ಡಿಕ್ಕಿ ಹೊಡೆದಿದ್ದು, ಚಾಲಕ ಕಾಲು ಕಳೆದುಕೊಂಡಿದ್ದಾನೆಂದು ಇಲ್ಲಿನ ಪೊಲೀಸರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಪ್ರಯಾಣಿಕರು ಚಾಲಕನಿಗೆ ನಿಧಾನವಾಗಿ ಗಾಡಿ ಓಡಿಸುವಂತೆ ಎಷ್ಟೇ ಹೇಳಿದ್ರೂ ಆತ ಕೇಳಿರಲಿಲ್ಲ. ಇದೀಗ ಪೊಲೀಸರು ಚಾಲಕನಿಗೆ 400 ರಿಂದ 1 ಸಾವಿರ ಥಾಯ್ ಬಟ್(ಅಂದಾಜು 700 ರಿಂದ 1900 ರೂ)ನಷ್ಟು ದಂಡ ವಿಧಿಸಲಿದ್ದಾರೆ. ಅಲ್ಲದೆ ಥೈಲ್ಯಾಂಡ್ ಆನೆ ಸಂರಕ್ಷಣಾ ಕೇಂದ್ರಕ್ಕೆ ಚಾಲಕ ನರಿಟ್ ಭಾರೀ ಮೊತ್ತದ ಹಣವನ್ನ ಪರಿಹಾರವಾಗಿ ಕಟ್ಟಬೇಕಿದೆ.

Comments are closed.