ರಾಷ್ಟ್ರೀಯ

ಮನೆ ಮುಂದೆ ಕಸ ಹಾಕಿದರೆಂಬ ಕಾರಣಕ್ಕೆ ಬಡಿದಾಡಿಕೊಂಡದ್ದು ಹೀಗೆ….ಈ ವೀಡಿಯೊ ಒಮ್ಮೆ ನೋಡಿ…

Pinterest LinkedIn Tumblr

ಫರಿದಾಬಾದ್: ಕಸ ವಿಚಾರವಾಗಿ ಎರಡು ಕುಟುಂಬದವರು ಸಿಕ್ಕ ಸಿಕ್ಕ ವಸ್ತುಗಳಿಂದ ಪರಸ್ಪರ ಬಡಿದಾಡಿಕೊಂಡ ಘಟನೆ ಹರಿಯಾಣದ ಫರಿದಾಬಾದ್ನಲ್ಲಿ ನಡೆದಿದೆ.

ಮನೆಯ ಎದುರು ಕಸ ಹಾಕಿದ್ದಾರೆ ಎಂದು ಮಹಿಳೆಯೋರ್ವಳು ಎದುರು ಮನೆಯ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾಳೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು ವಾಕ್ಸಮರಕ್ಕೆ ಕಾರಣವಾಯಿತು.

ಈ ಮಧ್ಯೆ ಇಬ್ಬರು ಗಂಡಸರು ಆಗಮಿಸಿದಾಗ ಬೈಗುಳ ವಿಕೋಪಕ್ಕೆ ತಿರುಗಿ ಮಾತು ಮಾತಿಗೆ ಬೆಳೆದು ಜಗಳಕ್ಕೆ ತಿರುಗಿದೆ. ನಂತ್ರ ಆಕ್ರೋಶಗೊಂಡು ಎರಡು ಕುಟುಂಬದವರು ಪರಸ್ಪರ ಕಲ್ಲು, ದೊಣ್ಣೆಯಿಂದ ಬಡಿದಾಡಿಕೊಂಡಿದ್ದಾರೆ. ಈ ದೃಶ್ಯಗಳು ಎಲ್ಲೆಡೆ ವೈರಲ್ ಆಗಿದೆ.

Comments are closed.