ಕಾಡು ಪ್ರಾಣಿಗಳು ಮುಖಾಮುಖಿಯಾದಾಗ ಭಯವಾಗದೇ ಇರದು. ಆದರೆ ಸಿಂಹವೊಂದು ಎದುರಿಗೇ ಬಂದರೂ ಬೈಕ್ ಸವಾರರು ಅಲ್ಲಿಂದ ಓಡಿಹೋಗದೆ ಹಾಗೇ ನಿಂತ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೆಣ್ಣು ಸಿಂಹವೊಂದು ಬೈಕ್ ಸವಾರರಿಗೆ ಮುಖಾಮುಖಿಯಾದ್ರೂ ಅವರು ಬೈಕ್ ನಿಲ್ಲಿಸಿ ಸಿಂಹ ಮುಂದೆ ಸಾಗೋವರೆಗೂ ಅಲ್ಲೇ ನಿಲ್ಲುತ್ತಾರೆ. ಬೈಕ್ ಸವಾರರನ್ನೇ ದಿಟ್ಟಿಸಿ ನೊಡುತ್ತಾ ಸಿಂಹ ಅವರಿಗೆ ಏನೂ ಮಾಡದೆ ತನ್ನ ಪಾಡಿಗೆ ಹೋಗುತ್ತದೆ.
ಸಿಂಹ ಹೋದ ನಂತರ ಬೈಕ್ ಸವಾರರು ನಗುತ್ತಾ ತಮ್ಮ ಪ್ರಯಾಣ ಮುಂದುವರೆಸುತ್ತಾರೆ. ಈ ವಿಡಿಯೋವನ್ನ ಎಲ್ಲಿ ಚಿತ್ರೀಕರಿಸಲಾಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
Comments are closed.