ಅಂತರಾಷ್ಟ್ರೀಯ

ಸಾವಿನ ಅಂಚಿನಲ್ಲಿದ್ದ ಮಗುವೊಂದನ್ನ ಜೀವರಕ್ಷಕನೊಬ್ಬ ಬದುಕುಳಿಸಿದ ಈ ವೀಡಿಯೋ ನೋಡಿ…

Pinterest LinkedIn Tumblr

https://youtu.be/jWaK11schSQ

ನ್ಯೂಯಾರ್ಕ್: ಅಮ್ಯೂಸ್‍ಮೆಂಟ್ ಪಾರ್ಕ್‍ಗಳ ಸ್ವಿಮ್ಮಿಂಗ್‍ಪೂಲ್‍ನಲ್ಲಿ ಯಾರು ಮುಳುಗಿ ಹೋದ್ರು ಗೊತ್ತಾಗಲ್ಲ ಬಿಡಿ. ಯಾಕಂದ್ರೆ ಅಷ್ಟು ಮಂದಿ ನೀರಿಗಿಳಿದಿರುತ್ತಾರೆ. ಇಂತಹದ್ದೇ ಒಂದು ಘಟನೆ ಅಮೆರಿಕದಲ್ಲಿ ನಡೆದಿದ್ದು, ಸಾವಿನ ಅಂಚಿನಲ್ಲಿದ್ದ ಮಗುವೊಂದನ್ನ ಜೀವರಕ್ಷಕರೊಬ್ಬರು ಬದುಕುಳಿಸಿದ್ದಾರೆ.

ಅಮೆರಿಕದ ಸೌಥ್ ಕರೋಲಿನಾದಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಜನರ ಮಧ್ಯದಲ್ಲಿ ಈಜಲಾಗದೇ ಮುಳುಗುತ್ತಿದ್ದ 3 ವರ್ಷದ ಕಂದಮ್ಮನನ್ನ ಜೀವರಕ್ಷಕನೊಬ್ಬ ಸ್ವಿಮ್ಮಿಂಗ್‍ಪೂಲ್‍ಗೆ ಹಾರಿ ರಕ್ಷಣೆ ಮಾಡಿದ್ದಾರೆ.

ಈ ದೃಶ್ಯವಳಿಗಳೆಲ್ಲ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆಶ್ಚರ್ಯವೆಂದರೆ ಮಗು ಸ್ವಿಮ್ಮಿಂಗ್‍ಪೂಲ್‍ನಲ್ಲಿ ಮುಳುಗುತ್ತಿರೋದು ಕಾಣ್ಸೋದೆ ಇಲ್ಲ. ಆದ್ರೂ ಈಜುಕೊಳದ ಬದಿಯಲ್ಲಿ ನಡೆದುಕೊಂಡು ಹೋಗ್ತಿದ್ದ ಜೀವರಕ್ಷಕ ಮಗು ಮುಳುಗೋದನ್ನ ಗಮನಿಸಿ ಚಂಗನೆ ಹಾರಿ ಅದರ ಜೀವ ಉಳಿಸಿದ್ದಾನೆ. ಪಕ್ಕದಲ್ಲೇ ಈಜುತ್ತಿದ್ರೂ ಇದನ್ನ ಕಾಣದ ಪ್ರವಾಸಿಗರು ಇದ್ರಿಂದ ಶಾಕ್ ಆಗಿದಂತೂ ಸುಳ್ಳಲ್ಲ.

Comments are closed.