ಅಂತರಾಷ್ಟ್ರೀಯ

ಮರದೊಳಗೆ ಸಿಕ್ಕಿಹಾಕಿಕೊಂಡಿದ್ದ ಹಸುವಿನ ತಲೆ ತಗೆಯೋಕೆ ಕ್ರೇನ್ ಬಂತು!

Pinterest LinkedIn Tumblr

2

ಲಂಡನ್: ಮೈದಾನದಲ್ಲಿ ಮೇಯುವುದನ್ನು ಬಿಟ್ಟು ಹಸುವೊಂದು ಮರದ ಪೊಟರೆಯೊಳಗೆ ಇಣಕಲು ಹೋಗಿ ತಲೆ ಅದರೊಳಗೆ ಸಿಲುಕಿಕೊಂಡ ಘಟನೆ ಇಂಗ್ಲೆಂಡ್‍ನಲ್ಲಿ ನಡೆದಿದೆ.

12

4

3

ಇಂಗ್ಲೆಂಡ್‍ನ ನಾರ್ಥ್ ಯಾರ್ಕ್‍ಶೈರ್ ಕೌಂಟಿಯಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಹಸು ಮರದೊಳಗೆ ಅದೇನನ್ನೂ ನೋಡಲು ಹೋಯ್ತು ಗೊತ್ತಿಲ್ಲ. ಅದರ ತಲೆ ಮರದ ಪೊಟರೆಯೊಳಗೆ ಸಿಲುಕಿಕೊಂಡಿದೆ.

ಹಸುವಿನ ತಲೆಯನ್ನ ಹೊರತೆಗೆಯಲು ಸಿಕ್ಕಾಪಟ್ಟೆ ಕಷ್ಟಪಟ್ಟ ಅಗ್ನಿಶಾಮಕ ಸಿಬ್ಬಂದಿ ಕೊನೆಗೆ ಕ್ರೇನ್‍ಗೆ ಹಾಗೂ ಹಸುವಿಗೆ ಹಗ್ಗ ಕಟ್ಟಿ ಅದರ ಮೂಲಕ ಹಸುವಿನ ತಲೆಯನ್ನ ಹೊರತೆಗೆದಿದ್ದಾರೆ. ಈ ಮೂಲಕ ಕೊನೆಗೂ ಹಸು ನಿಟ್ಟಿಸಿರು ಬಿಟ್ಟಿದೆ.

Comments are closed.