ಅಂತರಾಷ್ಟ್ರೀಯ

ಅಬ್ಬಾ…ಎಂಥಾ ಸಾಹಸ ….2 ಸಾವಿರ ಎತ್ತರದಲ್ಲಿ ರೋಪ್‍ವೇನಲ್ಲಿ ನಡೆದು ವಿಶ್ವದಾಖಲೆ…ಈ ವೀಡಿಯೋ ನೋಡಿ ಮೈ ರಾಮಂಚನ ಗೊಲ್ಲುತ್ತೆ

Pinterest LinkedIn Tumblr

ಪ್ಯಾರಿಸ್: ರೋಪ್‍ವೇ ಅತಿ ಕಷ್ಟಕರ ಸಾಹಸದಲ್ಲಿ ಒಂದಾಗಿದೆ. ಎಷ್ಟೋ ಮಂದಿ ರೋಪ್‍ವೇ ಮೇಲೆ ನಡೆದು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದೀಗ ಇಬ್ಬರು ಸಾಹಸಿಗಳು ರೋಪ್‍ವೇನಲ್ಲಿ ನಡೆದು ವಿಶ್ವದಾಖಲೆ ಮಾಡಿದ್ದಾರೆ.

ನಾಥನ್ ಪೌಲಿನ್ ಹಾಗೂ ಡ್ಯಾನಿ ಮೆನ್ಸಿಕ್ ಎಂದು ಸಾಹಸಿಗರು ಫ್ರಾನ್ಸ್‍ನ ಆಲ್ಗಿನ್‍ನಲ್ಲಿರುವ ಎರಡು ಪರ್ವತಗಳ ನಡುವೆ ಸುಮಾರು 2 ಸಾವಿರ ಅಡಿಗಳ ಮೇಲೆ ಬರೋಬ್ಬರಿ 600 ಮೀಟರ್ ಎಂದರೆ 0.6 ಕಿಮೀ ಉದ್ದ ಹಗ್ಗದ ಮೇಲೆ ನಡೆದು ದಾಖಲೆ ಸೃಷ್ಟಿಸಿದ್ದಾರೆ. ಈ ಹಿಂದೆ ನಾಥನ್ ಪೌಲಿನ್ 493 ಮೀಟರ್ ಉದ್ದ ರೋಪ್‍ವೇ ಮೇಲೆ ನಡೆದು ಸಾಹಸ ಮಾಡಿದ್ರು. ಈ ಮೂಲಕ ತಮ್ಮ ಹಿಂದಿನ ದಾಖಲೆಯನ್ನ ತಾವೇ ಮುರಿದಿದ್ದಾರೆ.

ದಾಖಲೆ ಹಿಂದಿದೆ ಶ್ರಮ: ಏಪ್ರಿಲ್ 19ರಂದು ಈ ದಾಖಲೆ ಮಾಡಿದ್ದು, ರೋಪ್‍ವೇ ನಿರ್ಮಿಸಲು 8 ಜನರ ತಂಡ 2 ದಿನಗಳ ಕಾಲ ಶ್ರಮಿಸಿದ್ದಾರೆ. ಜೊತೆಗೆ 4 ಕಿಮೀ ಕಾಲಿನಲ್ಲಿ ನಡೆದಿದ್ದು, ಸುಮಾರು 1.5 ಗಂಟೆ ಪರ್ವತವನ್ನ ಏರಿದ್ದಾರೆ. ಅಲ್ಲದೇ ಇವರು ದಾಖಲೆ ನಡೆದ ಹಗ್ಗದ ತೂಕ ಬರೋಬ್ಬರಿ 80 ಕೆಜಿ ಹೊಂದಿದೆ ಎಂದು ತಿಳಿದುಬಂದಿದೆ.

Comments are closed.