ಅಂತರಾಷ್ಟ್ರೀಯ

ಮೈದಾನದಲ್ಲಿ ಪ್ರೇಕ್ಷಕರ ಎದುರೆ ಬೇಸ್‍ಬಾಲ್ ಆಟ ಆಡಿದ ದೆವ್ವಗಳು ! ಈ ವೀಡಿಯೋ ನೋಡಿ ನಿಮಗೇ ಗೊತ್ತಾಗುತ್ತೆ…

Pinterest LinkedIn Tumblr

https://youtu.be/oRdH7oZnYc8

ಟೋಕಿಯೋ: ಮೈದಾನಕ್ಕೆ ಜನರೆಲ್ಲ ತಮ್ಮ ನೆಚ್ಚಿನ ತಂಡದ ಬೇಸ್ ಬಾಲ್ ಆಟವನ್ನ ನೋಡೊದಕ್ಕೆ ಬಂದಿದ್ರು. ಆದ್ರೆ ಅವರಿಗೆ ನೋಡ ಸಿಕ್ಕಿದ್ದು ಮಾತ್ರ ದೆವ್ವಗಳ ಡಿಫರೆಂಟ್ ಬೇಸ್‍ಬಾಲ್.

ಅರೆರೆ ದೆವ್ವಗಳೆಲ್ಲಾದ್ರೂ ಬೇಸ್ ಆಡ್ತಾವ ಅಂದ್ಕೋಬೇಡಿ. ಇದು ರಿಯಲ್ ಮನುಷ್ಯರೇ ದೆವ್ವದ ವೇಷಧರಿಸಿ ಬೇಸ್‍ಬಾಲ್ ಆಡಿದ ಕತೆ. ಟೋಕಿಯೋದಲ್ಲಿ ಗ್ರುಡ್ಜ್ ಹಾಗೂ ದಿ ರಿಂಗ್ ಬೇಸ್‍ಬಾಲ್ ಟೀಂನ ಮಧ್ಯೆ ಪಂದ್ಯ ಆಯೋಜಿಸಲಾಗಿತ್ತು. ಈ ನಡುವೆ ಕೆಲವು ಕಲಾವಿದರು ದೆವ್ವದ ವೇಷದಲ್ಲಿ ಬಂದು ಪ್ರೇಕ್ಷಕರಿಗೆ ಥ್ರಿಲ್ಲಿಂಗ್ ಆಟವನ್ನ ತೋರಿಸಿ ರಂಜಿಸಿದ್ದಾರೆ.

ಹೀಗೆ ವಿಶೇಷವಾಗಿ ಜಪಾನ್‍ನ ಸಿನಿಮಾ ತಂಡ ಬೇಸ್‍ಬಾಲ್ ಆಟದ ಮೂಲಕ ಚಿತ್ರ ಪ್ರಚಾರ ಮಾಡಿದ್ದಾರೆ. ಸಡಾಕೊ ವರ್ಸಸ್ ಕಯಾಕೋ ಎನ್ನುವ ಭೂತ ಪ್ರೇತ ಸಿನಿಮಾ ತಂಡದವರು ದೆವ್ವಗಳಂತೆ ವೇಷಧರಿಸಿ ಬೇಸ್‍ಬಾಲ್ ಆಡಿದ್ದರು.

Comments are closed.