ಲಂಡನ್: ಲಂಡನ್‍ನಲ್ಲಿ ನಾಯಿಯೊಂದು ಯಾರ ಸಹಾಯವೂ ಇಲ್ಲದೆ ಸ್ಕೇಟಿಂಗ್ ಮಾಡಿ ಅಚ್ಚರಿ ಮೂಡಿಸಿದೆ.
ಇಲ್ಲಿನ ಕ್ಲಿಸ್ಸಾರ್ಡ್ ಪಾರ್ಕ್‍ನಲ್ಲಿ ಫ್ರೆಂಚ್ ಬುಲ್ ಡಾಗ್ ತಳಿಯ ನಾಯಿ ಸ್ಕೇಟಿಂಗ್ ಬೋರ್ಡ್ ಏರಿ ಸವಾರಿ ಮಾಡಿದೆ. ಸ್ಕೇಟಿಂಗ್ ಹಲಗೆಯ ಮೇಲೆ ನಿಂತು ತನ್ನ ಪುಟ್ಟ ಕಾಲಿನಿಂದಲೇ ನೆಲವನ್ನು ತಳ್ಳುತ್ತಾ ಈ ನಾಯಿ ಸ್ಕೇಟಿಂಗ್ ಮಾಡುವುದನ್ನ ವಿಡಿಯೋದಲ್ಲಿ ನೋಡಬಹುದು. ಈ ನಾಯಿ ಸ್ಕೇಟಿಂಗ್ ಬೋರ್ಡ್ ಏರೋಕೆ ಅಥವಾ ವೇಗವಾಗಿ ಮುಂದೆ ಸಾಗೋಕೆ ಯಾರ ಸಹಾಯವನ್ನೂ ಪಡೆಯುವುದಿಲ್ಲ.
ಮಾಲೀಕ ಎರಾಕ್ ಸ್ಕೇಟ್ಸ್ ಸ್ಕೇಟಿಂಗ್ ಮಾಡಲು ನಾಯಿಗೆ ತರಬೇತಿ ನಿಡಿದ್ದು ಈಗ ಈ ನಾಯಿ ಯಾರ ಸಹಾಯವೂ ಇಲ್ಲದೆ ಸ್ಕೇಟಿಂಗ್ ಮಾಡುತ್ತೆ. ತನ್ನ ನಾಯಿ ಸ್ಕೇಟಿಂಗ್ ಮಾಡೋ ಸಾಕಷ್ಟು ವಿಡಿಯೋಗಳನ್ನ ಎರಾಕ್ ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಿದ್ದು, ಈಗಾಗಲೇ ಈ ನಾಯಿ ಸಖತ್ ಫೇಮಸ್ ಆಗಿದೆ.
Comments are closed.