ಅಂತರಾಷ್ಟ್ರೀಯ

ಫೋನ್ ನ ಬ್ಯಾಟರಿ ಹೀಟ್ ಸಮಸ್ಯೆಯ ಯಾಕಾಗುತ್ತದೆ ಗೊತ್ತಾ…ಇಲ್ಲಿದೆ ಮಾಹಿತಿ …

Pinterest LinkedIn Tumblr

111

ಬಹುತೇಕ ಮಂದಿಯ ತಲೆನೋವಿಗೆ ಕಾರಣವಾಗುತ್ತಿರುವ ಬ್ಯಾಟರಿ ಹೀಟ್ ಸಮಸ್ಯೆಯ ಯಾಕಾಗುತ್ತದೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.

1. ದೀರ್ಘಕಾಲದ ಆಟ: ಆಟ ಆಡುವುದರಿಂದ ನಿಮಗೆ ಖುಷಿ ಆದ್ರೆ ಸ್ಮಾರ್ಟ್‍ಫೋನ್‍ಗೆ ಬಿಸಿ ಆಗುತ್ತಿರುತ್ತದೆ. ಗೇಮಿಂಗ್ ಅಪ್ಲಿಕೇಶನ್ ರನ್ ಆಗುವಾಗ ಗ್ರಾಫಿಕ್ಸ್ ಪ್ರೊಸೆಸರ್ ರನ್ ಆಗುತ್ತಿರುತ್ತದೆ. ಪ್ರೊಸಸರ್ ನಿರಂತರವಾಗಿ ರನ್ ಆಗುತ್ತಿದ್ದಂತೆ ಹೇಗೆ ನೀವು ವಿವಿಧ ಹಂತಗಳನ್ನು ದಾಟುತ್ತಿರೋ ಅದೇ ರೀತಿಯಾಗಿ ನಿಮ್ಮ ಫೋನಿನ ಬಿಸಿ ಸಹ ಹಂತ ಹಂತವಾಗಿ ಏರತೊಡಗುತ್ತದೆ. ಹೀಗಾಗಿ ನಿರಂತವಾಗಿ 20-25 ನಿಮಿಷ ಗೇಮ್ ಆಡಿದ ಮೇಲೆ ಒಂದು ಬ್ರೇಕ್ ತೆಗೆದುಕೊಳ್ಳಿ.ಆಗ ಫೋನಿನ ಬಾಡಿ ಬಿಸಿಯಾಗುವುದು ಕಡಿಮೆ ಆಗುತ್ತದೆ.

2.ನಿರಂತರ 4ಜಿ, 3ಜಿ ಬಳಕೆ: ವೈಫೈ ಇಲ್ಲದ ಕಾರಣ ಮನೆಯಲ್ಲಿ ಅಥವಾ ಪ್ರಯಾಣದ ವೇಳೆ 4ಜಿ, 3ಜಿ ಡೇಟಾ ಆನ್ ಮಾಡಿಟ್ಟುಕೊಂಡಿರುತ್ತಾರೆ. ಸತತವಾಗಿ ಆನ್ ಆಗಿರುವ ಕಾರಣ ಪ್ರೊಸೆಸರ್ ಬಿಸಿಯಾಗುತ್ತದೆ. ಇದರ ಜೊತೆಯಲ್ಲಿ ಬ್ಯಾಕ್ ಗ್ರೌಂಡ್‍ನಲ್ಲಿ ಹೆಚ್ಚು ಆ್ಯಪ್‍ಗಳು ರನ್ ಆಗುತ್ತಿದ್ದರೂ ಫೋನ್ ಬಿಸಿಯಾಗುತ್ತದೆ.

3. ಬ್ಯಾಟರಿ: ಬ್ಯಾಟರಿ ಸಮಸ್ಯೆ ಆದಲ್ಲಿ ಅದನ್ನು ಕಂಪೆನಿಯ ಸರ್ವಿಸ್ ಸೆಂಟರ್‍ನಲ್ಲಿ ನೀಡಿ ಸರಿಪಡಿಸಿಕೊಳ್ಳಿ. ಹೊಸ ಬ್ಯಾಟರಿ ಬೇಕಿದ್ದಲ್ಲಿ ಅದೇ ಕಂಪೆನಿಯ ಬ್ಯಾಟರಿಯನ್ನು ಖರೀದಿಸಿ. ಕಡಿಮೆ ಹಣಕ್ಕೆ ಸಿಗುತ್ತದೆ ಎಂದು ತಿಳಿದು ಯಾವುದೋ ಕಂಪೆನಿಯ ಬ್ಯಾಟರಿಯನ್ನು ಹಾಕಿದ್ರೆ ಫೋನ್ ಬಿಸಿಯಾಗಿ ಮತ್ತೆ ಅದರ ರಿಪೇರಿಗೆ, ಬ್ಯಾಟರಿ ಖರೀದಿಗೆ ಖರ್ಚು ಮಾಡಿದ ಹಣಕ್ಕಿಂತ ಹೆಚ್ಚಿನ ಹಣವನ್ನು ಖರ್ಚುಮಾಡಬೇಕಾದಿತು.

4. ಲೋಕೇಶನ್ ಸೆಟ್ಟಿಂಗ್ಸ್: ಬಹುತೇಕ ಮಂದಿ ಲೋಕೇಶನ್ ಸೆಟ್ಟಿಂಗ್ಸ್‍ನ್ನು ಆನ್ ಮಾಡಿರುತ್ತಾರೆ. ಲೋಕೇಶನ್ ಸೆಟ್ಟಿಂಗ್ಸ್ ಆನ್ ಆಗಿದ್ರೆ ಬ್ಯಾಟರಿ ಬೇಗ ಖಾಲಿಯಾಗುತ್ತಿರುತ್ತದೆ ಜೊತೆಗೆ ನಿರಂತವಾಗಿ ಜಿಪಿಎಸ್ ಸಿಗ್ನಲ್ ಸರ್ಚ್ ಆಗುತ್ತಿರುತ್ತದೆ. ಈ ಕಾರಣದಿಂದಾಗಿ ಫೋನ್ ಬಿಸಿಯಾಗುತ್ತದೆ.

5.ಚಾರ್ಜಿಂಗ್ ವೇಳೆಯೂ ಬಳಕೆ: ಗೇಮ್ಸ್ ಆಡುವಾಗ ಅಥವಾ ಜಿಪಿಎಸ್ ಆನ್ ಆಗಿದ್ರೆ ಫೋನ್ ಹೇಗೆ ಬಿಸಿ ಆಗುತ್ತದೆ ಎನ್ನುವುದನ್ನು ಈ ಮೇಲೆ ತಿಳಿಸಲಾಗಿದೆ. ಈಗ ಚಾರ್ಜಿಂಗ್ ವೇಳೆಯೂ ಈ ಕೆಲಸ ಮಾಡಿದರೆ ಫೋನ್‍ನ ಪ್ರೊಸೆಸರ್‍ಗೆ ಒತ್ತಡ ಹೆಚ್ಚಾಗುತ್ತದೆ. ಒಂದು ಕಡೆ ನಿಮ್ಮ ಕೆಲಸ ಇನ್ನೊಂದು ಕಡೆ ಚಾರ್ಜಿಂಗ್, ಎರಡನ್ನೂ ತಡೆದುಕೊಂಡು ಪ್ರೊಸೆಸಿಂಗ್ ಮಾಡುವಾಗ ಪ್ರೊಸೆಸರ್ ಮೇಲೆ ಹೆಚ್ಚು ಒತ್ತಡ ಬೀಳುವುದರಿಂದ ಫೋನ್ ಬಿಸಿ ಆಗುತ್ತದೆ.

6. ಪ್ರೊಸೆಸರ್: ಈ ಮೇಲೆ ತಿಳಿಸಿರುವ ಅಂಶಗಳಿಂದ ಫೋನ್ ಬಿಸಿಯಾಗುತ್ತದೆ ನಿಜ. ಆದರೆ ಬಹುತೇಕ ಸಂದರ್ಭದಲ್ಲಿ ಫೋನ್ ಬಿಸಿಯಾಗಲು ಕಾರಣ ಅದರಲ್ಲಿರುವ ಪ್ರೊಸೆಸರ್. ಕಂಪೆನಿಗಳ ಕೆಲ ಪ್ರೊಸೆಸರ್‍ನಿಂದಾಗಿ ಸ್ಮಾರ್ಟ್‍ಫೋನ್ ಹೀಟ್ ಆಗುತ್ತದೆ. ಸ್ನಾಪ್‍ಡ್ರಾಗನ್ ಕಂಪೆನಿಯ 615, 801 ಮತ್ತು 810 ಪ್ರೊಸೆಸರ್‍ಗಳನ್ನು ಬಳಸಿ ಯಾವೆಲ್ಲ ಕಂಪೆನಿ ಸ್ಮಾರ್ಟ್‍ಫೋನ್ ತಯಾರಿಸಿದೆಯೋ ಆ ಫೋನ್‍ಗಳಲ್ಲಿ ಹೀಟ್ ಸಮಸ್ಯೆ ಹೆಚ್ಚಿತ್ತು.

ಎಕ್ಸ್ ಪೀರಿಯಾ ಝಡ್ 3 ಪ್ಲಸ್ ಹೀಟ್ ಆಗಲು ಸ್ನಾಪ್ ಡ್ರಾಗನ್ 810 ಪ್ರೊಸೆಸರ್ ಕಾರಣ ಎಂದು ಸೋನಿಯೇ ಹೇಳಿತ್ತು. ಫೋನ್ ಖರೀದಿ ಮಾಡುವಾಗ ಬಹುತೇಕ ಮಂದಿ ಕ್ಯಾಮೆರಾ, ಸ್ಕ್ರೀನ್ ಸೈಜ್ ನೋಡಿ ಖರೀದಿ ಮಾಡುತ್ತಾರೆ ವಿನಾಃ ಹಾರ್ಡ್‍ವೇರ್ ವಿಶೇಷತೆ ಗಮನಿಸುವುದಿಲ್ಲ. ಹಾರ್ಡ್‍ವೇರ್ ವಿಶೇಷತೆಗಳಾದ ಬ್ಯಾಟರಿ, ಪ್ರೊಸೆಸರ್, ರ್ಯಾಮ್‍ಗಳ ಮೇಲೆ ಸ್ವಲ್ಪ ಕಣ್ಣಾಡಿಸಿ ಖರೀದಿ ಮಾಡಿದ್ರೆ ಈ ಸಮಸ್ಯೆಯಿಂದ ಪಾರಾಗಬಹುದು.

Comments are closed.