ಕರಾವಳಿ

ಕಾಸರಗೋಡು ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಥೋಮ್ಸನ್ ಜೋಸ್ ನೇಮಕ

Pinterest LinkedIn Tumblr

ksrgod_new_sp

ಕಾಸರಗೋಡು, ಜೂ.7: ಕಾಸರಗೋಡು ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಥೋಮ್ಸನ್ ಜೋಸ್ರನ್ನು ನೇಮಿಸಲಾಗಿದೆ. ಈಗ ಪೊಲೀಸ್ ಅಧಿಕಾರಿಯಾಗಿರುವ ಡಾ.ಎ. ಶ್ರೀನಿವಾಸ್ರನ್ನು ಪಾಲಕ್ಕಾಡ್ಗೆ ವರ್ಗಾಯಿಸಲಾಗಿದೆ.

ಥೋಮ್ಸನ್ ಜೋಸ್ ಈ ಹಿಂದೆ ಒಂದೂವರೆ ವರ್ಷಗಳ ಕಾಲ ಕಾಸರಗೋಡು ಎಸ್ಪಿಯಾಗಿದ್ದರು. 2015ರ ಫೆಬ್ರವರಿ 12 ರಂದು ಥೋಮ್ಸನ್ ಜೋಸ್ ರನ್ನು ತ್ರಿಶ್ಯೂರು ಪೊಲೀಸ್ ಅಕಾಡಮಿ ತರಬೇತಿ ಕೇಂದ್ರಕ್ಕೆ ವರ್ಗಾಯಿಸಿ ಕನ್ನಡಿಗರಾದ ಎ. ಶ್ರೀನಿವಾಸ್ರನ್ನು ಕಾಸರಗೋಡು ಎಸ್ಪಿಯನ್ನಾಗಿ ನಿಯುಕ್ತಿಗೊಳಿಸಲಾಗಿತ್ತು.

ಕಡಿಮೆ ಅವಧಿಯಲ್ಲೇ ಶ್ರೀನಿವಾಸ್ರನ್ನು ವರ್ಗಾವಣೆ ಮಾಡಲಾಗಿದೆ. ದಕ್ಷ ಅಧಿಕಾರಿ ಎಂಬ ಹೆಸರು ಪಡೆದಿದ್ದ ಥೋಮ್ಸನ್ ಜೋಸ್ರ ವರ್ಗಾವಣೆ ವಿರುದ್ಧ ನಾಗರಿಕರು ಹೋರಾಟ ನಡೆಸಿದ್ದರು. ಮರಳು ಮಾಫಿಯಾ ವರ್ಗಾವಣೆ ಹಿಂದೆ ಕೆಲಸ ಮಾಡಿತ್ತು ಎಂಬ ಆರೋಪ ಕೇಳಿಬಂದಿತ್ತು.

ಈ ಆರೋಪದ ನಡುವೆ ಥೋಮ್ಸನ್ ಜೋಸ್ರನ್ನು ಮತ್ತೆ ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸಾಕಷ್ಟು ಗಮನ ನೀಡಿದ್ದ ಶ್ರೀನಿವಾಸ್ರ ದಿಢೀರ್ ವರ್ಗಾವಣೆ ಕೂಡಾ ಈಗ ಸುದ್ದಿಗೆ ಗ್ರಾಸವಾಗುತ್ತಿದೆ.

Comments are closed.