ಕರಾವಳಿ

ಹೋರಿಯೊಂದು ಹಾಯ್ದು ಬೆಳ್ಳಾರೆ ದೇವಾಲಯದ ಮ್ಯಾನೇಜರ್ ಮೃತ್ಯು.

Pinterest LinkedIn Tumblr

bellare_temple_bull

ಸುಳ್ಯ, ಜೂ.7: ಬೆಳ್ಳಾರೆ ದೇಗುಲಕ್ಕೆ ಸೇರಿದ ಹೋರಿಯೊಂದು ಹಾಯ್ದು ದೇವಾಲಯದ ಮ್ಯಾನೇಜರ್ ಮೃತಪಟ್ಟ ದಾರುಣ ಘಟನೆ ಸೋಮವಾರ ನಡೆದಿದೆ.

ಅಜಪಿಲ ಶ್ರೀ ಮಹಾಲಿಂಗೇಶ್ವರ  ದೇವಸ್ಥಾನದಲ್ಲಿ ಭಾರೀ ಗಾತ್ರದ ಹೋರಿಯೊಂದು ಕಳೆದ 7 ವರ್ಷಗಳಿಂದ ನೆಲೆಸಿದ್ದು. ಅದನ್ನು ದೇವಳಕ್ಕೆ ಸಂಬಂಧಪಟ್ಟ ಸಿಬ್ಬಂದಿ ನೋಡಿಕೊಳ್ಳುತ್ತ ದೇವಳದ ಮ್ಯಾನೇಜರ್ ನಾರಾಯಣ ಆಹಾರ ನೀಡುತ್ತಿದ್ದರು.

ಸೋಮವಾರ ದೇವಾಲಯದ ಸಮೀಪದಲ್ಲಿ ಮೇಯಲು ಕಟ್ಟಿ ಹಾಕಿದ್ದ ಹೋರಿಯನ್ನು ನಾರಾಯಣ ಅವರು ಪೂಜೆಯ ವೇಳೆಗೆ ದೇವಾಲಯಕ್ಕೆ ಕರೆತರಲು ಹೋಗಿದ್ದ ವೇಳೆ ಹೋರಿ ಅವರಿಗೆ ಕೊಂಬುಗಳಿಂದ ಹಾಯ್ದಿತ್ತೆನ್ನಲಾಗಿದೆ. ಇತರರು ಅದರ ಹಗ್ಗವನ್ನು ಎಳೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಗಂಭೀರವಾಗಿ ಗಾಯಗೊಂಡ ನಾರಾಯಣ ಸ್ಥಳದಲ್ಲೇ ಮೃತಪಟ್ಟರು.

ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆದು ಬಳಿಕ ಮನೆಯವರಿಗೆ ಮೃತದೇಹವನ್ನು ಬಿಟ್ಟುಕೊಡಲಾಯಿತು.ಪೈಲಾರಿನ  ಕಳಂಜೇರಿಯವರಾದ ನಾರಾಯಣ ಬೆಳ್ಳಾರೆಯಲ್ಲಿ ವಾಸ್ತವ್ಯದಲ್ಲಿದ್ದರು. ಕಳೆದ 15 ವರ್ಷಗಳಿಂದ ದೇವಸ್ಥಾನದಲ್ಲಿ ಮ್ಯಾನೇಜರ್ ಆಗಿದ್ದರು. ಅವರಿಗೆ 40 ವರ್ಷ ವಯಸ್ಸಾಗಿತ್ತು.

Comments are closed.