ಕರ್ನಾಟಕ

ಪುರಸಭೆಯ ಮಹಿಳಾ ಶೌಚಾಲಯದಲ್ಲಿ ಕ್ಯಾಮೆರಾ ಇರಿಸಿ ಚಿತ್ರೀಕರಣ ನಡೆಸುತಿದ್ದ ವಿಕೃತಕಾಮಿ ಬಂಧನ

Pinterest LinkedIn Tumblr

madhava

ಕಾರವಾರ: ಪುರಸಭೆಯ ಮಹಿಳಾ ಶೌಚಾಲಯದಲ್ಲಿ ಕ್ಯಾಮೆರಾ ಇರಿಸಿ ಚಿತ್ರೀಕರಣ ನಡೆಸುತಿದ್ದ ವಿಕೃತಕಾಮಿಯನ್ನ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಪೊಲೀಸರು ಬಂಧಿಸಿದ್ದಾರೆ.

28 ವರ್ಷದ ಮಾಧವ ಕಿಣಿ ಬಂಧನಕ್ಕೊಳಗಾದ ಆರೋಪಿ. ಪುರಸಭೆಯಲ್ಲಿ ಡಾಟಾ ಎಂಟ್ರಿ ಕೆಲಸ ನಿರ್ವಹಿಸುತಿದ್ದ ಈತ ಮಹಿಳೆಯರ ಶೌಚಾಲಯದಲ್ಲಿ ಕ್ಯಾಮೆರಾ ಅಳವಡಿಸಿ ಚಿತ್ರೀಕರಣ ನಡೆಸುತ್ತಿದ್ದ.

ಪುರಸಭೆ ಪ್ರಭಾರ ಮುಖ್ಯ ಅಧಿಕಾರಿ ನಾಗೇಂದ್ರ ಗಾಂವಕರ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಕುಮಟಾ ಠಾಣೆ ಪೊಲೀಸರು ಇದೀಗ ಆರೋಪಿ ಮಾಧವ ಕಿಣಿಯನ್ನು ಬಂಧಿಸಿದ್ದಾರೆ.

Comments are closed.