ಅಂತರಾಷ್ಟ್ರೀಯ

ಬೀರ್ ಕದಿಯೋಕೆ ಹೋದವರು ಏನ್ ಎಡ್ವಟ್ ಮಾಡಿಕೊಂಡರು ಗೊತ್ತಾ..? ಈ ವೀಡಿಯೋ ನೋಡಿ…

Pinterest LinkedIn Tumblr

https://youtu.be/-MFIrmbaFrU

ಕಳ್ಳರು ತಾವು ಕಳ್ಳತನ ಮಾಡುವಾಗ ಯಾರಾದ್ರೂ ನಮ್ಮನ್ನ ನೋಡಿಬಿಡ್ತಾರಾ ಅಂತ ಹುಷಾರಾಗಿ ಕದಿಯೋಕೆ ಪ್ಲಾನ್ ಮಾಡ್ತಾರೆ. ಆದ್ರೆ ಖದೀಮನೊಬ್ಬ ಬೀರ್ ಕದಿಯೋಕೆ ಬಂದು ಆತನ ಮೇಲೆ ಬೀರ್ ಬಾಟಲಿ ತುಂಬಿದ್ದ ಫ್ರಿಡ್ಜ್ ಬಿದ್ದು ಕಳ್ಳತನ ಯತ್ನ ಫ್ಲಾಪ್ ಆದ ಘಟನೆ ನಡೆದಿದೆ.

ಮಳಿಗೆಯೊಂದರ ಮುಂದೆ ಬೀರ್ ಬಾಟಲಿಗಳಿದ್ದ ಫ್ರಿಡ್ಜ್‍ಗಳನ್ನ ಸಾಲಾಗಿ ಇಡಲಾಗಿತ್ತು. ಅದರಲ್ಲಿ ಒಂದೋ ಎರಡೋ ಬಾಟಲಿಯನ್ನ ಕದಿಯೋಣ ಅಂತ ವ್ಯಕ್ತಿಯೊಬ್ಬ ಪ್ರಯತ್ನಿಸಿದ್ದ. ಆದ್ರೆ ಎಷ್ಟೇ ಪ್ರಯತ್ನ ಪಟ್ರೂ ಫ್ರಿಡ್ಜ್‍ನ ಬಾಗಿಲು ತೆಗೆಯಲಾಗದಿದ್ದಾಗ ಆತ ಸಹಾಯಕ್ಕಾಗಿ ಮತ್ತೊಬ್ಬನನ್ನು ಕರೆದ. ಎರಡನೇ ವ್ಯಕ್ತಿ ವೀರಾಧಿವೀರನ ಥರ ಜೋರಾಗಿ ಬಾಗಿಲು ಎಳೆದು ಇಡೀ ಫ್ರಿಡ್ಜ್ ಆತನ ಮೇಲೆ ಬಿದ್ದು ಒದ್ದಾಡಬೇಕಾಯ್ತು.

ನಂತರ ಪಕ್ಕದಲ್ಲೇ ನಿಂತಿದ್ದವನು ಆತನ ಸಹಾಯಕ್ಕೆ ಬಂದು ಇಬ್ಬರೂ ಎದ್ವಾ ಬಿದ್ವಾ ಅಂತ ಅಲ್ಲಿಂದ ಕಾಲ್ಕಿತ್ತರು. ಈ ಎಲ್ಲಾ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದ್ರೆ ಈ ಘಟನೆ ನಡೆದ ಸ್ಥಳ ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲ.

Comments are closed.