ಅಂತರಾಷ್ಟ್ರೀಯ

96 ವರ್ಷದ ವೃದ್ಧ ಪದವಿ ಪಡೆಯುವ ಮೂಲಕ ವಿಶ್ವದಾಖಲೆ

Pinterest LinkedIn Tumblr

digree

ಟೋಕಿಯೋ: ಸಾಧನೆಗೆ ವಯಸ್ಸಿಲ್ಲ ಎನ್ನುವಂತೆ ಜಪಾನ್ 96 ವರ್ಷದ ವೃದ್ಧರೊಬ್ಬರು ಪದವಿ ಪಡೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

1919ರಲ್ಲಿ ಹೀರೋಶಿಮಾದಲ್ಲಿ ಜನಿಸಿದ ಹಿರಾಟ ಸೆರಾಮಿಕ್ ಕಲೆಯಲ್ಲಿ ಪದವಿ ಪಡೆದಿದ್ದಾರೆ.ಈ ಮೂಲಕ ಅತಿ ಹಿರಿಯ ವಯಸ್ಸಿನಲ್ಲಿ ಪದವಿ ಪಡೆದ ವ್ಯಕ್ತಿಯಾಗಿ ಗಿನ್ನಿಸ್ ವಿಶ್ವದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ಸೇರಿಸಿದ್ದಾರೆ.

ಈ ಪದವಿ ಪಡೆಯಲು ಹಿರಟ ಒಟ್ಟು 11 ವರ್ಷಗಳ ಕಾಲ ಅಧ್ಯಯನ ಮಾಡಿದ್ದಾರೆ. ವಿಶೇಷ ಏನು ಎಂದರೆ ಎರಡನೇ ಮಹಾಯುದ್ಧದಲ್ಲಿ ಜಪಾನ್ ಪರ ಹೋರಾಟ ನಡೆಸಿದ್ದಾರೆ.

ತಮ್ಮ ಸಾಧನೆ ಬಗ್ಗೆ ಮಾತನಾಡಿದ ಅವರು, ಈ ವಯಸ್ಸಿನಲ್ಲಿ ಸಂತೋಷವಾಗಿ ಕಾಲ ಕಳೆಯಲು ಬಯಸುತ್ತಾರೆ. ಆದರೆ ನಾನು ಹೊಸ ಹೊಸ ವಿಷಯಗಳನ್ನು ತಿಳಿಯಲು ಇಷ್ಟಪಡುತ್ತೇನೆ ಎಂದು ಹೇಳಿದರು.

Comments are closed.