ಅಂತರಾಷ್ಟ್ರೀಯ

ವಸ್ತ್ರವಿನ್ಯಾಸಕಿಯೊಬ್ಬಳು ಪಕ್ಷಿಗಳಿಗೆ ನೀರುಣಿಸೋಕೆ ಮಾಡಿದ ಐಡಿಯ ಒಮ್ಮೆ ನೀವೇ ನೋಡಿ…

Pinterest LinkedIn Tumblr

ಕೊಲಂಬಿಯಾ: ಪಕ್ಷಿಗಳು ಕುಡಿಯಲಿ ಅಂತ ಮನೆ ಮುಂದೆಯೋ ಅಥವಾ ಛಾವಣಿ ಮೇಲೋ ನೀರು ಇಡೋದು ಕಾಮನ್. ಆದರೆ ಕೆನೆಡಾದ ವಸ್ತ್ರವಿನ್ಯಾಸಕಿಯೊಬ್ಬಳು ಪಕ್ಷಿಗಳಿಗೆ ದಾಹ ತಣಿಸೋದಕ್ಕೆ ಅಂತಾನೇ ವಿಶೇಷ ಉಡುಪನ್ನ ವಿನ್ಯಾಸ ಮಾಡಿದ್ದಾಳೆ

ವಸ್ತ್ರವಿನ್ಯಾಸಕಿ ಕ್ಯಾರಿ ಕ್ಯಾಂಪ್‍ಬೆಲ್ ತನ್ನ ಉಡುಪಿನಲ್ಲೇ ನೀರಿನ ಬಟ್ಟಲುಗಳನ್ನ ಇಟ್ಟುಕೊಂಡು ಹಮ್ಮಿಂಗ್‍ಬರ್ಡ್‍ಗಳ ದಣಿವು ನೀಗಿಸಿದ್ದಾಳೆ. ಕೆಂಪು ಬಣ್ಣದ ಈ ಉಡುಪು ಗುಲಾಬಿ ಹೂವಿನಂತಿದ್ದು, ಉಡುಪಿನ ಮೇಲೆ ಸಕ್ಕರೆ ನೀರು ತುಂಬಿದ ಬಟ್ಟಲುಗಳನ್ನ ಇಟ್ಟುಕೊಂಡು ಪಕ್ಷಿಗಳಿಗೆ ನೀರುಣಿಸುತ್ತಾಳೆ. ಹಲವಾರು ಹಮ್ಮಿಂಗ್ ಬರ್ಡ್ ಪಕ್ಷಿಗಳು ವಿನ್ಯಾಸಕಿಯ ವಸ್ತ್ರದಲ್ಲಿರುವ ಬಟ್ಟಲಿನಿಂದ ನೀರು ಕುಡಿಯೋದನ್ನ ವಿಡಿಯೋದಲ್ಲಿ ನೋಡಬಹುದು.

ಈಕೆ ಕಳೆದ 2 ವರ್ಷಗಳಿಂದ ಪ್ರತಿನಿತ್ಯ ಪಕ್ಷಿಗಳಿಗೆ ನೀರಿಟ್ಟು ಅವುಗಳ ದಾಹ ನೀಗಿಸುತ್ತಿದ್ದಾಳೆ. ಮೊದಲಿಗೆ ಎರಡೋ ಮೂರೋ ಪಕ್ಷಿಗಳು ಬರುತ್ತಿದ್ದವು ಆದ್ರೆ ಈಗ ಅವುಗಳ ಸಂಖ್ಯೆ 300ಕ್ಕೆ ಏರಿದೆ ಅಂತಾಳೆ ವಿನ್ಯಾಸಕಿ ಕ್ಯಾರಿ.

Comments are closed.