ಅಂತರಾಷ್ಟ್ರೀಯ

ಎಸ್ಕಲೇಟರ್ ಸರಿ ಮಾಡಲು ಹೋದವನೇ ಅದರೊಳಗೆ ಸಿಲುಕಿ ನರಳಾಡಿದ..ಈ ವೀಡಿಯೋ ಒಮ್ಮೆ ನೋಡಿ…

Pinterest LinkedIn Tumblr

https://youtu.be/LmoIzyrPWus

ಬೀಜಿಂಗ್: ಎಸ್ಕಲೇಟರ್‍ನಲ್ಲಿ ಸಿಲುಕಿ ಎಷ್ಟೋ ಜನ ಸಾವನ್ನಪ್ಪಿ, ಕೈ ಕಾಲುಗಳನ್ನು ಕಳೆದುಕೊಂಡಿದ್ದಾರೆ. ಆದ್ರೆ ಇಲ್ಲಿ ಎಸ್ಕಲೇಟರ್ ಸರಿ ಮಾಡಲು ಹೋದವನೇ ಅದರೊಳಗೆ ಸಿಲುಕಿ ನರಳಾಡಿದ ಘಟನೆ ಚೀನಾದಲ್ಲಿ ನಡೆದಿದೆ.

ಹೌದು. ಚೀನಾದ ಬಿಬಿ ಜಿಲ್ಲೆಯ ಚಾಂಗಿಂಗ್ ನಗರದಲ್ಲಿ ಎಸ್ಕಲೇಟರ್ ರಿಪೇರಿ ಮಾಡಲು ಹೋಗಿದ್ದ ತಂತ್ರಜ್ಞರೊಬ್ಬರು ಅದರೊಳಗೆ ಸಿಲುಕಿ ಜೀವ ಉಳಿಸಿಕೊಳ್ಳಲು ಪರದಾಡಿದ್ದಾರೆ. ಎಸ್ಕಲೇಟರ್ ಸಿಲುಕಿದ್ದ ಆತ ಉಸಿರಾಡಲಾಗದೇ ಪ್ರಜ್ಞೆ ತಪ್ಪಿದ್ದ.

ಎಸ್ಕಲೇಟರ್ ಒಳಗೆ ಆತ ಸಿಲುಕಿದ್ದರಿಂದ ಹೊರತೆಗೆಯುವುದು ಅಷ್ಟು ಸುಲಭವಾಗಿರಲಿಲ್ಲ. ನಂತರ ಅಗ್ನಿಶಾಮಕ ಸಿಬ್ಬಂದಿ ಎಸ್ಕಲೇಟರ್ ರಾಡ್‍ಗಳನ್ನ ಕತ್ತರಿಸಿ ಆತನನ್ನ ಹೊರತೆಗೆದ್ರು. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಜೀವ ರಕ್ಷಣೆ ಮಾಡಿದ್ದಾರೆ.

Comments are closed.