ಗಲ್ಫ್

ಸೌದಿಯಲ್ಲಿ ವೇತನವೂ ಇಲ್ಲದೆ…ಊರಿಗೆ ಮರಳಲು ಆಗದೆ ಕಂಗಾಲಾಗಿರುವ 200 ಮಂದಿ ರಾಜಸ್ಥಾನಿ ಕಾರ್ವಿುಕರು

Pinterest LinkedIn Tumblr

saudi_labor

ಸೌದಿಯಲ್ಲಿ ಕಾರ್ವಿುಕರಾಗಿ ಕೆಲಸ ಮಾಡುತ್ತಿದ್ದ ರಾಜಸ್ಥಾನದ ಜುನ್ಜುನು ಜಿಲ್ಲೆಯ 200ರಷ್ಟು ಜನರು ವೇತನವಿಲ್ಲದೆ ಸಿಲುಕಿಕೊಂಡಿದ್ದಾರೆ. ಸೌದಿಯಲ್ಲಿ ಕಾರ್ವಿುಕರಾಗಿ ಕೆಲಸ ಮಾಡುತ್ತಿರುವ 200ಕ್ಕೂ ಹೆಚ್ಚು ಜನರಿಗೆ ಕಳೆದ ಕೆಲವು ತಿಂಗಳುಗಳಿಂದ ವೇತನ ಬಂದಿಲ್ಲ ಹಾಗೂ ಊರಿಗೆ ಮರಳಲು ಕೂಡ ಅವರಲ್ಲಿ ಹಣವಿಲ್ಲ ಎಂದು ಕಾರ್ವಿುಕರ ಕುಟುಂಬಗಳು ಹೇಳಿವೆ.

ಅಲ್ಸಿಸರ್ ಗ್ರಾಮದ ಮೊಹಮ್ಮದ್ ಇಶಾಕ್ ಮತ್ತು ಮೊಹಮ್ಮದ್ ಮುಸ್ಲಿಂ ದೂರವಾಣಿ ಮೂಲಕ ತನ್ನ ಮನೆಯವರನ್ನು ಸಂರ್ಪಸಿದ್ದು ತಾವು ಹಾಗೂ ಜತೆಗಿರುವ 200 ಮಂದಿ ಕಾರ್ವಿುಕರು ಅಸಹಾಯರಾಗಿದ್ದೇವೆ. ನಮ್ಮ ಆವಶ್ಯಕತೆಗಳಿಗೆ ಕಂಪನಿಯಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ತಮ್ಮ ಅಳಲು ವ್ಯಕ್ತಪಡಿಸಿದ್ದಾರೆ.

ಸಮಸ್ಯೆಯ ಬಗ್ಗೆ ಕಾರ್ವಿುಕ ನ್ಯಾಯಾಲಯ ಮತ್ತು ಭಾರತೀಯ ರಾಯಭಾರ ಕಛೇರಿಗಳನ್ನು ಸಂರ್ಪಸಿದರೂ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂದು ಕಾರ್ವಿುಕರ ಕುಟುಂಬಗಳು ತಿಳಿಸಿವೆ.

ಜುನ್ಜುನು ಜಿಲ್ಲೆಯ ಸಂಸದ ಸಂತೋಷ್ ಅಹ್ಲಾವತ್ ಸಮಸ್ಯೆಗೆ ಸಂಬಂಧಪಟ್ಟಂತೆ ವಿವರಗಳನ್ನು ಸಂಗ್ರಹಿಸಿ ವಿದೇಶಾಂಗ ಸಚಿವಾಲಯದಿಂದ ಸಹಾಯ ಕೋರಲಾಗುವುದು ಎಂದು ತಿಳಿಸಿದ್ದಾರೆ.

Comments are closed.