ರಾಷ್ಟ್ರೀಯ

ನಾಲ್ಕು ವಿಷಯಗಳಲ್ಲಿ ಫೇಲ್ ಆದ ವಿದ್ಯಾರ್ಥಿನಿಗೆ ಅರ್ಥಶಾಸ್ತ್ರದಲ್ಲಿ ಸಿಕ್ಕಿದೆ ಬರೋಬರಿ 100 ಅಂಕ!

Pinterest LinkedIn Tumblr

result

ನವದೆಹಲಿ: 12ನೆ ತರಗತಿಯ ಫಲಿತಾಂಶ ಗುಜರಾತ್ ಶಿಕ್ಷಣ ಮಂಡಳಿಗೆ ಆಶ್ಚರ್ಯ ತಂದಿದೆ. ಏಕೆಂದರೇ ಅಂಕಪಟ್ಟಿಯ ಪ್ರಕಾರ ನಾಲ್ಕು ವಿಷಯದಲ್ಲಿ ಫೇಲಾದ ವಿದ್ಯಾರ್ಥಿನಿಯೊಬ್ಬಳು ಅರ್ಥಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕಗಳಿಸಿದ್ದಾಳೆ.

ಈ ಫಲಿತಾಂಶ ಶಿಕ್ಷಣ ತಜ್ಞರಿಗೆ ಅಚ್ಚರಿ ಉಂಟು ಮಾಡಿದೆ. ಗುಜರಾತಿ ಭಾಷೆಯಲ್ಲಿ 13 ಅಂಕ ಹಾಗೂ ಸಂಸ್ಕೃತದಲ್ಲಿ 4 ಅಂಕ ಗಳಿಸಿದದ ಈಕೆ, ಐಚ್ಛಿಕ ವಿಷಯಗಳಾದ ಸಮಾಜಶಾಸ್ತ್ರದಲ್ಲಿ 20, ಮನಶಾಸ್ತ್ರದಲ್ಲಿ 5 ಹಾಗೂ ಭೂಗೋಳ ಶಾಸ್ತ್ರದಲ್ಲಿ 35 ಅಂಕ ಗಳಿಸಿದ್ದಾಳೆ. ಆರು ವಿಷಯಗಳ ಅಂಕ ಸೇರಿಸಿದರೂ 100 ಅಂಕ ಆಗುವುದಿಲ್ಲ. ಆದರೆ ಅರ್ಥಶಾಸ್ತ್ರವೊಂದರಲ್ಲೇ 100 ಅಂಕ ಪಡೆದಿದ್ದರ ಹಿಂದಿನ ಗುಟ್ಟೇನು ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ.

ಶಿಕ್ಷಣ ತಜ್ಞ ಡಾ. ಜೋಶಿ ಅವರು ‘ಇದು ದತ್ತಾಂಶ ದೋಷವಾಗಿರಬಹುದಾಗಿದ್ದು, ಅಂಕವನ್ನು ನಮೂದಿಸುವ ಸಂದರ್ಭ ಹತ್ತರ ಮುಂದೊಂದು ಸೊನ್ನೆ ಸೇರ್ಪಡೆಯಾಗಿರಬೇಕು, ಇದರಿಂದಾಗಿ ಹತ್ತು ಅಂಕದ ಬದಲು ಅಂಕ ಪಟ್ಟಿಯಲ್ಲಿ ನೂರಕ್ಕೆ ನೂರು ಎಂದು ನಮೂದಿತವಾಗಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Comments are closed.