ಅಂತರಾಷ್ಟ್ರೀಯ

ಪ್ರೇಯಸಿಯ ದೇಹಕ್ಕೆ ಆಲ್ಕೋಹಾಲ್ ಸುರಿದು ಬೆಂಕಿ ಹಚ್ಚಿ ಸಜೀವ ದಹನ ಮಾಡಿದ ಭಗ್ನ ಪ್ರೇಮಿ !

Pinterest LinkedIn Tumblr

mm

ರೋಮ್: ಭಗ್ನ ಪ್ರೇಮಿಯೊಬ್ಬ ಪ್ರೇಯಸಿಯ ಕಾರಿಗೆ ಬೆಂಕಿಹಾಕಿ ಆಕೆಯನ್ನು ಸಜೀವ ದಹನ ಮಾಡಿರುವ ಘಟನೆ ಇಟಲಿಯ ರೋಮ್ ನಗರದಲ್ಲಿದೆ.

ರೋಮ್ ವಿವಿಯ 22 ವರ್ಷದ ವಿದ್ಯಾರ್ಥಿನಿ ಸಾರಾ ಡಿ ಪೈಟ್ರಾಂಟೊನಿಯೊ ಭಗ್ನ ಪ್ರೇಮಿಯ ಕೃತ್ಯಕ್ಕೆ ಬಲಿಯಾಗಿದ್ದಾಳೆ. ಸಾರಾ 27 ವರ್ಷದ ವಿನ್ಸ್‍ಝೋ ಪುಡುಯಾನೋ ಪ್ರೀತಿಯನ್ನು ನಿರಾಕರಿಸಿ ದೂರ ಹೋಗಿದ್ದಕ್ಕೆ ಕೋಪಗೊಂಡ ಆತ ಆಕೆಯನ್ನು ಭಾನುವಾರ ಸಜೀವ ದಹನ ಮಾಡಿದ್ದಾನೆ.

ಸಾರಾ ಹಾಗೂ ವಿನ್ಸ್‍ಝೋ ಹಲವು ಪ್ರೇಮಿಗಳಾಗಿದ್ದರು. ಆದ್ರೆ ಇವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ದೂರ ಸರಿದ್ದರು. ಒಂದೆಡೆ ಸಾರಾ ಬೇರೊಬ್ಬನ ಜೊತೆ ಪ್ರೀತಿ ಶುರುವಾಗಿದ್ದಳು. ಆದ್ರೆ ವಿನ್ಸ್‍ಝೋ ಮಾತ್ರ ಸಾರಾಳನ್ನು ಮರೆತಿಲ್ಲ. ಈ ವಿಚಾರ ಆತನಿಗೆ ತಿಳಿದಂತೆ ಆಕೆಯ ಕೊಲೆ ಮಾಡಿದ್ದಾನೆ.

ಪ್ರೇಯಸಿಯ ಭೀಕರ ಹತ್ಯೆ: ಸಾರಳನ್ನು ಕೊಲೆ ಮಾಡಲೇ ಬೇಕು ಎಂದು ಪಣತೊಟ್ಟಿದ್ದ ಆತ ಆಕೆಯ ಕಾರಿಗೆ ಬೆಂಕಿ ಹಚ್ಚಿದ್ದಾನೆ. ಆದ್ರೆ ಆಕೆ ಕಾರಿನಿಂದ ಹೊರಬಂದಿದ್ದಾಳೆ. ಆದ್ರೂ ಬಿಡದ ಆತ ಆಕೆಯನ್ನು ಹಿಡಿದು ಮುಖಕ್ಕೆ ಹಾಗೂ ದೇಹಕ್ಕೆ ಆಲ್ಕೋಹಾಲ್ ಸುರಿದು ಸಿಗರೇಟ್ ಲೈಟರ್‍ನಿಂದ ಬೆಂಕಿ ಹಚ್ಚಿ ಸಜೀವ ದಹನ ಮಾಡಿ ಪ್ರೇಯಸಿಯ ಹತ್ಯೆ ಗೈದಿದ್ದಾನೆ.

ಸದ್ಯ ಭಗ್ನಪ್ರೇಮಿಯನ್ನು ಪೊಲೀಸರು ಬಂಧಿಸಿ ತನಿಖೆ ಆರಂಭಿಸಿದ್ದಾರೆ. ಮೊದಲಿಗೆ ಕೊಲೆ ಮಾಡಿದ್ದನ್ನು ನಿರಾಕರಿಸಿದ್ದ ಆತ ನಂತರ ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

Comments are closed.