ಅಂತರಾಷ್ಟ್ರೀಯ

ರೊಮಾನಿಯನ್ ಲೀಗ್ ಪಂದ್ಯದ ವೇಳೆ ಮೈದಾನದಲ್ಲೇ ಫುಟ್ಬಾಲ್ ಆಟಗಾರ ಸಾವು ! ಸಾವಿನ ಕ್ಷಣ ಈ ವೀಡಿಯೋದಲ್ಲಿದೆ…

Pinterest LinkedIn Tumblr

https://youtu.be/m9asBmki3LA

ರೊಮಾನಿಯನ್: ಫುಟ್ಬಾಲ್ ಪಂದ್ಯದ ವೇಳೆ ಆಟಗಾರನೊಬ್ಬ ಕುಸಿದು ಮೃತಪಟ್ಟ ಧಾರುಣ ಘಟನೆ ರೊಮಾನಿಯನ್ ಲೀಗ್‍ನಲ್ಲಿ ನಡೆದಿದೆ.

ಕ್ಯಾಮರೂನ್ ರಾಷ್ಟ್ರೀಯ ತಂಡದ ಮಿಡ್‍ಫೀಲ್ಡರ್ 26 ವರ್ಷದ ಪ್ಯಾಟ್ರಿಕ್ ಎಕೆಂಗ್ ಮೈದಾನದಲ್ಲೇ ಪ್ರಾಣಬಿಟ್ಟ ಯುವ ಆಟಗಾರ. ನಿನ್ನೆ ರಾತ್ರಿ ರೊಮಾನಿಯನ್ ಲೀಗ್‍ನಲ್ಲಿ ಡೈನಾಮೋ ಬುಕಾರೆಸ್ಟ್ ಹಾಗೂ ವಿಲ್ಟೋರಲ್ ಕೋನ್ಸ್ಟಾಂಟ ತಂಡಗಳ ನಡುವಿನ ಪಂದ್ಯ ನಡೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಪಂದ್ಯದ 70ನೇ ನಿಮಿಷದಲ್ಲಿ ಪ್ಯಾಟ್ರಿಕ್ ಏಕಾಏಕಿ ಮೈದಾನದಲ್ಲೇ ಕುಸಿದುಬಿದ್ರು. ತತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಯುವ ಆಟಗಾರ ಮೃತಪಟ್ಟಿದ್ದರು.

ಈ ಹಿಂದೆಯೂ ಕೂಡ ಇದೇ ಕ್ಲಬ್‍ನ ಆಟಗಾರ ಕೆಟಾಲಿಯನ್ ಹಲ್ದಾನ್ 2000ನೇ ಇಸವಿಯ ಅಕ್ಟೋಬರ್‍ನಲ್ಲಿ ಮೈದಾನದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದ. 2003ರಲ್ಲಿ ಫ್ರಾನ್ಸ್‍ನಲ್ಲಿ ಕಾನ್ಫಡರೇಶನ್ ಪಂದ್ಯ ನಡೆಯುತ್ತಿರುವ ವೇಳೆ ಕ್ಯಾಮರೂನ್‍ನ ದೇಶದ ಮಾರ್ಕ್ ವಿವಿಯನ್ ಕೂಡ ಮೈದನದಲ್ಲೇ ಹೃದಾಯಾಘಾತಕ್ಕೆ ಒಳಗಾಗಿದ್ರು. ಕಳೆದ ವರ್ಷ ಎಪ್ರಿಲ್‍ನಲ್ಲಿ ಬೆಲ್ಜಿಯಂ ಪಂದ್ಯಾವಳಿಯಲ್ಲೂ ಆಟಗಾರನೊಬ್ಬ ಮೈದಾನದಲ್ಲಿ ಕುಸಿದುಬಿದ್ದಿದ್ದ. ನಂತರ 3 ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.

Write A Comment