ಅಂತರಾಷ್ಟ್ರೀಯ

ಈ ಬಾರ್‍ನಲ್ಲಿ ನಾಯಿಗಳೇ ಸಪ್ಲೈರ್ ಗಳು ! ಇದೆಂಥ ಬಾರ್ ಅಂದುಕೊಂಡಿರ …ಈ ವೀಡಿಯೋ ನೋಡಿದರೆ ನಿಮಗೆ ಆಶ್ಚರ್ಯ ಆಗಬಹುದು…

Pinterest LinkedIn Tumblr

https://youtu.be/nTiVnj7g0rA

ಲಂಡನ್: ಮನೆಯಲ್ಲಿ ನಾಯಿಗಳು ಬಿದ್ದ ಬಾಲ್‍ಗಳನ್ನು ಎತ್ತಿಕೊಂಡು ಬರ್ತಾವೆ. ಅಂತೆಯೇ ತನ್ನ ಮಾಲೀಕ ಹೇಳಿದ ಕೆಲಸವನ್ನೆಲ್ಲ ಮಾಡ್ತವೆ. ಆದ್ರೆ ಲಂಡನ್‍ನಲ್ಲಿ ನಾಯಿಗಳು ಬಾರ್‍ನಲ್ಲಿ ಬಿಯರ್ ಬಾಟಲಿ ಸಪ್ಲೈ ಮಾಡ್ತಿವೆ.

ಹೌದು. ಲಂಡನ್‍ನಲ್ಲಿ ನಿರ್ಮಾಣವಾಗಿರುವ 1664 ಪಾಪ್ ಅಪ್ ಬಾರ್‍ನಲ್ಲಿ ನಾಯಿಗಳು ಸಪ್ಲೈಯರ್‍ಗಳಾಗಿ ಕೆಲಸಮಾಡಲು ಆರಂಭಿಸಿವೆ. ಬಾರ್ ಬರುವ ಗ್ರಾಹಕರಿಗೆ ಅವರಿದ್ದ ಜಾಗಕ್ಕೆ ಈ ನಾಯಿಗಳು ಬಿಯರ್ ಬಾಟಲ್‍ಗಳನ್ನು ತೆಗೆದುಕೊಂಡು ಹೋಗಿ ನೀಡುತ್ತವೆ.

ಮೇ 6 ರಂದು ಈ ವಿಶೇಷ ಬಾರ್ ತೆರೆಯಲಾಗಿದ್ದು, ಗ್ರಾಹಕರಿಗೆ ವಿನೂತನ ಅನುಭವವನ್ನು ನೀಡಲು ಈ ರೀತಿಯಾಗಿ ನಾಯಿಗಳಿಂದ ಬಿಯರ್ ಸಪ್ಲೈ ಮಾಡುವ ಯೋಜನೆಯನ್ನು ಮಾಲೀಕರು ಮಾಡಿದ್ದಾರೆ. ಈ ಬಾರ್‍ನಲ್ಲಿ ಸಪ್ಲೈಯರ್‍ಗಳಾಗಿರುವ ಜರ್ಮನ್ ಶೆಫರ್ಡ್ ನಾಯಿಗಳ ಕುತ್ತಿಗೆಗೆ ಸಣ್ಣ ಬ್ಯಾರೆಲ್‍ಗಳನ್ನು ಕಟ್ಟಲಾಗಿರುತ್ತದೆ. ಅದರೊಳಗೆ ಬಿಯರ್ ಬಾಟಲಿಗಳನ್ನು ಇಟ್ಟು ನಾಯಿಗಳನ್ನು ಕಳಿಸಲಾಗುತ್ತದೆ. ಗ್ರಾಹಕರು ಬ್ಯಾರೆಲ್‍ನಿಂದ ಬಾಟಲಿ ತೆಗೆದುಕೊಳ್ಳುತ್ತಾರೆ.

Write A Comment