ಅಂತರಾಷ್ಟ್ರೀಯ

ಪತಿಯ ಜೊತೆಗೆ ಬೇರೆ ಮಹಿಳೆಯನ್ನು ಕಂಡು ಮುನಿದ ಪತ್ನಿ ….ರಸ್ತೆಯಲ್ಲೇ ಮಾರಮಾರಿ! ಈ ವೀಡಿಯೋ ನೋಡಿ..

Pinterest LinkedIn Tumblr

https://youtu.be/A9ehHwRsNaQ

ಬೀಜಿಂಗ್: ಪತಿಯೇ ಪರದೈವ ಎಂದು ಪೂಜಿಸುವ ಪತ್ನಿಗೆ ಆಕೆಯ ಸ್ಥಾನಕ್ಕೆ ಬೇರೆಯಾರಾದ್ರೂ ಬಂದ್ರೆ ಸಹಿಸ್ತಾಳ ಹೇಳಿ. ಇಂತಹದ್ದೇ ಒಂದು ಘಟನೆ ಚೀನಾದಲ್ಲಿ ನಡೆದಿದ್ದು, ಪತಿಯ ಜೊತೆಗೆ ಬೇರೆ ಮಹಿಳೆಯನ್ನು ಕಂಡು ಮುನಿದ ಪತ್ನಿ ಹಾಗೂ ಪತಿಯ ನಡುವೆ ರಸ್ತೆಯಲ್ಲೇ ಮಾರಾಮಾರಿ ನಡೆದಿದೆ.

ಮದುವೆಯಾದ ಪತಿ ಇನ್ನೊಬ್ಬಾಕೆ ಜೊತೆ ಸುತ್ತಾಡುತ್ತಿದ್ದಲ್ಲದೇ ಆಕೆಯನ್ನು ಮದುವೆಯಾಗಲು ನಿರ್ಧರಿಸಿದ್ದ. ಈ ವಿಚಾರ ತಿಳಿದ ಪತ್ನಿ ರಸ್ತೆ ಮಧ್ಯೆ ಕಾರು ತಡೆದು ಮಹಿಳೆಯನ್ನ ತರಾಟೆಗೆ ತೆಗೆದುಕೊಂಡಿದ್ದಳು. ಆದ್ರೆ ಇದರಿಂದ ಸಿಟ್ಟಿಗೆದ್ದ ಪತಿ ಪತ್ನಿಯನ್ನೇ ನಡುರಸ್ತೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿ ಹೊರಟು ಹೋಗಿದ್ದಾನೆ.

ಆಗಿದ್ದೇನು?: ರಸ್ತೆಯಲ್ಲಿ ಪತಿಯ ಕಾರು ತಡೆದ ಪತ್ನಿ ಏಕಾಏಕಿ ಪರಸ್ತ್ರೀ ಮೇಲೆ ದಾಳಿ ಮಾಡಲು ಶುರುಮಾಡಿದ್ದಳು. ಆಕೆಯನ್ನ ಮನಬಂದಂತೆ ಥಳಿಸಿದ್ದಲ್ಲದೇ ಕೂದಲನ್ನು ಹಿಡಿದು ಕಾರಿಂದ ಹೊರತರಲು ಪ್ರಯತ್ನಿಸುತ್ತಿದ್ದಾಗ, ಹಿಂದೆಯಿಂದ ಪತಿ ಆಕೆಯನ್ನು ಹಿಡಿದೆಳೆದು ಹೀನವಾಗಿ ಥಳಿಸಿದ್ದಾನೆ. ನಂತರ ಪರಸ್ತ್ರೀಯೊಂದಿಗೆ ಜಾಗಖಾಲಿ ಮಾಡಿದ್ದಾನೆ.

Write A Comment